ಬಜಾಲ್ ಸಂತ ವಿನ್ಸೆಂಟ್ ಡಿಪಾವ್ಲ್ ಸಂಸ್ಥೆಯ ವಾರ್ಷಿಕೋತ್ಸವ

Update: 2022-09-27 15:08 GMT

ಮಂಗಳೂರು, ಸೆ.27: ಬಜಾಲ್ ಸಂತ ವಿನ್ಸೆಂಟ್ ಡಿಪಾವ್ಲ್ ಸಂಸ್ಥೆಯ 61ನೇ ವಾರ್ಷಿಕೋತ್ಸವದ ಕಾರ್ಯಕ್ರಮವು ರವಿವಾರ ಬಜಾಲ್ ಸಂತ ಜೋಸೆಫರ ಹಿರಿಯ ಪ್ರಾಥಮಿಕ ಶಾಲಾ ಸಭಾಂಗಣದಲ್ಲಿ ನಡೆಯಿತು.

ಬಜಾಲ್ ಪವಿತ್ರ ಅತ್ಮಾರ ದೇವಾಲಯದಲ್ಲಿ ವಂ.ಫಾ. ರಿಚರ್ಡ್ ಕ್ವಾಡ್ರಸ್ (ಕಪುಚಿನ್) ದಿವ್ಯಬಲಿ ಪೂಜೆ ಅರ್ಪಿಸಿದರು. ಬಳಿಕ ನಡೆದ ಕಾರ್ಯಕ್ರಮದಲ್ಲಿ ಬಜಾಲ್ ಚರ್ಚ್‌ನ ಧರ್ಮಗುರು ವಂ.ಫಾ. ಆ್ಯಂಡ್ರೂ ಡಿಸೋಜ ವಾರ್ಷಿಕೋತ್ಸವಕ್ಕೆ ಚಾಲನೆ ನೀಡಿದರು.

ಅತಿಥಿಗಳಾಗಿ ಸೈಂಟ್ ವಿನ್ಸೆಂಟ್ ಡಿಪಾವ್ಲ್ ಸಭೆಯ ದಾನಿಗಳಾದ ಜೆರೊಮ್ ಪಿಂಟೊ, ಫೆಲಿಕ್ಸ್ ಡಿಸೋಜ, ಚರ್ಚಿನ ಪಾಲನ ಮಂಡಳಿಯ ಉಪಾಧ್ಯಕ್ಷ ದೀಪಕ್ ಡಿಸೋಜ, ಕಾರ್ಯದರ್ಶಿ ಸೀಮಾ ತಾವ್ರೋ, ನಿವೃತ್ತ ಧರ್ಮಗುರು ವಂ.ಫಾ. ರಿಚರ್ಡ್ ಸಲ್ಡಾನಾ ಹಾಗೂ ಸೈಂಟ್ ತೆರೆಝಾ ಕಾನ್ವೆಂಟಿನ ಸಿಸ್ಟರ್ ಸುನೀತಾ ಉಪಸ್ಥಿತರಿದ್ದರು.

ಸಂಸ್ಥೆಯಲ್ಲಿ 31 ವರ್ಷಗಳ ಕಾಲ ಸೇವೆ ಸಲ್ಲಿಸಿದ ವಿಕ್ಟರ್ ಸೈಮನ್ ಡಿಸೋಜ ಹಾಗೂ ಫ್ರಾನ್ಸಿಸ್ ಕ್ಸೇವಿಯರ್ ಲೋಬೊ ಅವರನ್ನು ಸನ್ಮಾನಿಸಲಾಯಿತು.

ಸಂಸ್ಥೆಯ ಕಾರ್ಯದರ್ಶಿ ಗ್ರೇಸಿ ನೊರೊನ್ಹಾ ವರದಿ ವಾಚಿಸಿದರು.  ಸಂಸ್ಥೆಯ ಅಧ್ಯಕ್ಷ ಹೆನ್ರಿ ಡಿಸೋಜ ಸ್ವಾಗತಿಸಿದರು. ಮೈಕಲ್ ಅದ್ರಾಂದೆ ವಂದಿಸಿದರು. ಡೊಲ್ಫಿ  ಡಿಸೋಜ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News