ಅಮೃತ ಕಾಲಕ್ಕೆ ಭಾರತ ಸದೃಢ: ರಾಷ್ಟ್ರಪತಿ ದ್ರೌಪದಿ ಮುರ್ಮು

Update: 2022-09-27 17:22 GMT

ಬೆಂಗಳೂರು, ಸೆ.27:ಸ್ವಾತಂತ್ರ್ಯಗಳಿಸಿ ಒಂದು ನೂರು ವರ್ಷಗಳು ಪೂರ್ಣಗೊಳಿಸುವ 2047ರ ಅಮೃತಕಾಲದ ವೇಳೆಗೆ ಭಾರತವು ಸಮೃದ್ಧ ಮತ್ತು ಸದೃಢ ರಾಷ್ಟ್ರವಾಗಲಿದೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮುಹೇಳಿದ್ದಾರೆ.

ಮಂಗಳವಾರ ನಗರದಎಚ್‍ಎಎಲ್‍ನಲ್ಲಿಸಮಗ್ರ ಕುಳಿರರಿಮೆ ಯಂತ್ರತಯಾರಿಕಾ ಸೌಲಭ್ಯ (ಇಂಟೆಗ್ರೇಟೆಡ್‍ಕ್ರಯೋಜೆನಿಕ್‍ಎಂಜಿನ್ ಮ್ಯಾನುಫ್ಯಾಕ್ಚರಿಂಗ್ ಫೆಸಿಲಿಟಿ)ವನ್ನು ಉದ್ಘಾಟಿಸಿ ಮಾತನಾಡಿದಅವರು, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಜೊತೆಗೆ ಕೈ ಜೋಡಿಸಿ ಹಿಂದುಸ್ತಾನ್‍ ಏರೋನಾಟಿಕ್ಸ್ ಲಿಮಿಟೆಡ್  ಕುಳಿರರಿಮೆ ಮತ್ತುಅರೆ ಕುಳಿರರಿಮೆ ಯಂತ್ರಗಳ ತಯಾರಿಕೆಯಲ್ಲಿದಾಪುಗಾಲು ಹಾಕುತ್ತಿರುವುದು ಸ್ವಾವಲಂಬೀ ಭಾರತಕ್ಕೆ ಮೆರುಗುತರುವಂತಾಗಿದೆಎಂದು ತಿಳಿಸಿದರು.

ಕಲಾಂ: ಮಾಜಿರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಂ ಅವರು ದುಬಾರಿ ಮೊತ್ತದ ಕರೋನರಿ ಸ್ಟಂಟ್‍ದರವನ್ನುತಂತ್ರಜ್ಞಾನ ಬಳಸಿ ದೇಶೀಯವಾಗಿ ಅಭಿವೃದ್ಧಿಪಡಿಸಿ ರಾಜು ಸ್ಟೆಂಟ್ ರೂಪಿಸಿ ಮಾನವೀಯತೆ ಮೆರೆದ ಮಹನೀಯಎಂದುಬಣ್ಣಿಸಿದರು.

ಕೇಂದ್ರಆರೋಗ್ಯ ಮತ್ತುಕುಟುಂಬ ಕಲ್ಯಾಣಖಾತೆಯರಾಜ್ಯ ಸಚಿವೆಡಾ.ಭಾರತಿ ಪ್ರವೀಣ್ ಪವಾರ್ ಮಾತನಾಡಿ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಮತ್ತು ಹಿಂದುಸ್ತಾನ್‍ಏರೋನಾಟಿಕ್ಸ್ ಲಿಮಿಟೆಡ್‍ಎರಡನ್ನೂಕಂಡಾಗಅಸಾಧ್ಯಎಂಬುದು ವೈಜ್ಞಾನಿಕ ಪದವೇಅಲ್ಲಎಂದೆನಿಸುತ್ತದೆಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News