ಸೊಷಿಯಲ್ ಅಚೀವ್ಮೆಂಟ್ ಫೊರಮ್ ತಲಪಾಡಿ: ನೂತನ ಪದಾಧಿಕಾರಿಗಳ ಆಯ್ಕೆ
Update: 2022-09-28 14:10 IST
ಉಳ್ಳಾಲ: ಸೊಷಿಯಲ್ ಅಚೀವ್ಮೆಂಟ್ ಫೊರಮ್ ತಲಪಾಡಿ ಇದರ ವಾರ್ಷಿಕ ಮಹಾಸಭೆಯು ಸಂಸ್ಥೆಯ ಕಛೇರಿಯಲ್ಲಿ ಅದ್ಯಕ್ಷ ಶೇಕ್ ಮಹಮ್ಮದ್ ಟಿ.ಎಮ್ ರವರ ಸಭಾದ್ಯಕ್ಷತೆಯಲ್ಲಿ ಜರಗಿತು. ಈ ಸಂದರ್ಭದಲ್ಲಿ 2022. 24 ನೇ ಸಾಲಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.
ಅದ್ಯಕ್ಷರಾಗಿ ಶೇಕ್ ಮಹಮ್ಮದ್ ಟಿ.ಎಂ. ಪ್ರಧಾನ ಕಾರ್ಯದರ್ಶೀ ಯಾಗಿ ಬಿ.ಎಸ್ ಇಸ್ಮಾಯಿಲ್, ಕೋಶಾಧಿಕಾರಿಯಾಗಿ ಐಸನ್ ಯಾನೆ ಹುಸೈನ್, ಸಂಚಾಲಕರಾಗಿ ಜಾಫರ್.ಜಾಬಿ,ಕ್ರಿಡಾ ಕಾರ್ಯದರ್ಶಿ ಯಾಗಿ ನವಾಝ್ ಕೆ.ಜಿ, ಉಪಾದ್ಯಕ್ಷರಾಗಿ ಶಫೀಕ್, ಕಾರ್ಯದರ್ಶಿಯಾಗಿ ಅಬೂಬಕ್ಕರ್ ಕೊಲಂಗರೆ , ನಾಲ್ಕು ಮಂದಿಯನ್ನು ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.