×
Ad

ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ಸ್ವಚ್ಛ ಸಾಗರ ಕಾರ್ಯಕ್ರಮ

Update: 2022-09-28 16:58 IST

ಕೊಣಾಜೆ: ಯುವ ರೆಡ್ ಕ್ರಾಸ್ ಘಟಕ ಯೆನೆಪೋಯ ವಿಶ್ವವಿದ್ಯಾನಿಲಯ ದೇರಳಕಟ್ಟೆ ಹಾಗೂ ಲಯನ್ಸ್ ಕ್ಲಬ್ ಕಾವೂರ್ ಇವರ ವತಿಯಿಂದ 'ಸ್ವಚ್ಛ ಸಾಗರ' ಕಾರ್ಯಕ್ರಮ ತಣ್ಣೀರುಬಾವಿ ಸಮುದ್ರ ಕಿನಾರೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಕ್ಲಬ್ ನ ಕಾರ್ಯದರ್ಶಿ  ಅಶ್ವಿನ್ ಕುಮಾರ್ ಮಾತನಾಡಿ ಕಾರ್ಯಕ್ರಮದ ಬಗ್ಗೆ ವಿವರಿಸಿದರು.  ಯುವ ರೆಡ್ ಕ್ರಾಸ್ ಸ್ವಯಂ ಸೇವಕರು ಮತ್ತು ಲಯನ್ಸ್ ಕ್ಲಬ್ ಕಾವೂರ್ ಸದಸ್ಯರು ಸಮುದ್ರ ಕಿನಾರೆ ಪರಿಸರವನ್ನು ಸ್ವಚ್ಛಗೊಳಿಸಿ ತಾಜ್ಯ ವಿಲೇವಾರಿ ಲಕೋಟೆಗಳಲ್ಲಿ  ತುಂಬಿದರು. 

ಯುವ ರೆಡ್ ಕ್ರಾಸ್ ಸ್ವಯಂಸೇವಕರು 5 ಗುಂಪುಗಳಲ್ಲಿ ಸ್ವಚ್ಛ ಸಾಗರ ಬಿಂಬಿಸುವ ಮರಳಿನ ಕಲಾಕೃತಿ ತಯಾರಿಸಿದರು. ಹತ್ತಿರದ ಎಲ್ಲ ಅಂಗಡಿಗಳಿಗೂ ಸ್ವಚ್ಛತೆಯ ಘೋಷಣೆ ಸಾರುವ ಭಿತ್ತಿಚಿತ್ರಗಳನ್ನು ಅಂಟಿಸಲಾಯಿತು. ಸ್ವಯಂ ಸೇವಕರು ಸ್ವಚ್ಛ ಸಾಗರ ಸಂದೇಶ ಸಾರುವ ಗುಂಪು ನೃತ್ಯ ಪ್ರದರ್ಶಿಸಿದರು.

ಲಯನ್ಸ್ ಕ್ಲಬ್ ನ  ನಿತ್ಯಾನಂದ ಶೆಟ್ಟಿ,  ಯುವ ರೆಡ್ ಕ್ರಾಸ್ ಯೆನೆಪೋಯ ಇದರ ನೋಡಲ್ ಅಧಿಕಾರಿ, ನಿತ್ಯಶ್ರೀ ಬಿ ವಿ, ಡಾ. ಸಯ್ಯದ್, ಡಾ. ಅರುಣ್ ದೀಪ್, ಡಾ. ತಾರಿಕ್, ಡಾ. ಹರಿನಾರಾಯಣ, ವಿಕ್ಟರ್ ಮೊರಾಸ್ ,  ಹೇಮಲತಾ ರಘು, ಸಾಲಿಯಾನ್ ಸ್ವರೂಪ ಶೆಟ್ಟಿ ಇವರು ಉಪಸ್ಥಿತರಿದ್ದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News