ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌: ಭವಾನಿ ಜೋಗಿಗೆ 6 ಚಿನ್ನದ ಪದಕ

Update: 2022-09-28 11:56 GMT

ಮಂಗಳೂರು, ಸೆ.28:  ಶಕ್ತಿನಗರದ ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಈಜು ತರಬೇತುದಾರರಾದ  ಭವಾನಿ ಜೋಗಿ ಸೆ. 16 ರಿಂದ 19ರವರೆಗೆ ಮಧ್ಯಪ್ರದೇಶದ ಇಂದೋರ್‌ನಲ್ಲಿ ನಡೆದ ಓಪನ್ ಮಾಸ್ಟರ್ಸ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 6 ಚಿನ್ನದ ಪದಕಗಳನ್ನು ಪಡೆದಿದ್ದಾರೆ.

ಇವರು ಶಾಟ್‌ಪುಟ್, ಡಿಸ್ಕಸ್ ಥ್ರೋ, ಲಾಂಗ್ ಜಂಪ್, ಟ್ರಿಪಲ್ ಜಂಪ್‌ನಲ್ಲಿ ವೈಯಕ್ತಿಕ ಚಿನ್ನವನ್ನು ಗಳಿಸಿದ್ದಾರೆ.  ಎರಡು ಮಹಿಳೆಯರ 4X100 ಮೀಟರ್ ರಿಲೇ ಮತ್ತು 4X100 ಮೀಟರ್ ಮಿಶ್ರ ರಿಲೇಯಲ್ಲಿಯೂ ಚಿನ್ನದ ಪದಕವನ್ನು ಪಡೆಯುವುದರ ಮೂಲಕ ಕೀರ್ತಿಯನ್ನು ಗಳಿಸಿದ್ದಾರೆ.

ಭವಾನಿ ಜೋಗಿ ಸ್ವಿಮ್ಮಿಂಗ್‌ನಲ್ಲಿಯೂ ಚಿನ್ನದ ಪದಕ ವಿಜೇತೆ ಹಾಗೂ ರಾಷ್ಟ್ರೀಯ ಪವರ್ ಲಿಫ್ಟರ್ ಆಗಿರುತಾತಿರೆ. ಅಥ್ಲೆಟಿಕ್ಸ್‌ನಲ್ಲಿ ಮಲೇಷ್ಯಾ, ಸಿಂಗಾಪುರ, ಬ್ಯಾಂಕಾಕ್, ಚೀನಾ, ಥೈಲ್ಯಾಂಡ್ ಮತ್ತು ಶ್ರೀಲಂಕಾದಲ್ಲಿ 2 ಬಾರಿ ಅಂತರರಾಷ್ಟ್ರೀಯ ಚಿನ್ನದ ಪದಕಗಳನ್ನು ಗೆದ್ದಿದ್ದಾರೆ.

ನಾಸಿಕ್‌ನಲ್ಲಿ ನಡೆಯುವ ರೆನಲ್ ಮೀಟ್‌ಗೆ ಮತ್ತು ನೇಪಾಳದಲ್ಲಿ ನಡೆಯುವ ಅಂತರಾಷ್ಟ್ರೀಯ ಕೂಟಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಅವರ ಅಜೇಯ ವಿಜಯಕ್ಕಾಗಿ ಆಡಳಿತ ಮಂಡಳಿಯ ಕಾರ್ಯದರ್ಶಿ ಸಂಜೀತ್ ನಾಯಕ್, ಆಡಳಿತಾಧಿಕಾರಿ ಡಾ. ಕೆ. ಸಿ ನಾಯಕ್, ಪ್ರಧಾನ ಸಲಹೆಗಾರ ರಮೇಶ್ ಕೆ, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪೃಥ್ವಿರಾಜ್, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಕಾಮತ್ ಜಿ ಹಾಗೂ ಶಿಕ್ಷಕ, ಶಿಕ್ಷಕೇತರ ಸಿಬ್ಬಂದಿ ವರ್ಗ ಮತ್ತು ಎಲ್ಲಾ ವಿದ್ಯಾರ್ಥಿಗಳು ಅಭಿನಂದಿಸಿ ಶುಭ ಹಾರೈಸಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News