ಮಂಗಳೂರು: ಖಾಸಗಿ ಆಸ್ಪತ್ರೆಯ ಡೀನ್ ನಾಪತ್ತೆ; ದೂರು ದಾಖಲು

Update: 2022-09-28 16:03 GMT
ಉರ್ಬನ್ ಡಿಸೋಜ

ಮಂಗಳೂರು, ಸೆ.28: ದೇರಳಕಟ್ಟೆಯ ಖಾಸಗಿ ಆಸ್ಪತ್ರೆಯೊಂದರ ಕಾಲೇಜಿನಲ್ಲಿ ಡೀನ್ ಆಗಿದ್ದ  ಡಾ. ಉರ್ಬನ್ ಡಿಸೋಜಾ(57) ನಾಪತ್ತೆಯಾಗಿರುವ ಬಗ್ಗೆ ಅವರ ಪತ್ನಿ ಡಾ.ವಿಲ್ಮಾ ಡಿಸೋಜ ಪೊಲೀಸರಿಗೆ ದೂರು ನೀಡಿದ್ದಾರೆ.

ಡಾ.ಉರ್ಬನ್ ಅವರು ಸೆ.25ರಂದು ಸಂಜೆ ಬೇರೆ ಕಡೆ ಊಟಕ್ಕೆ ಹೋಗಲಿಕ್ಕಿದೆ ಎಂದು ಹೇಳಿ ಮನೆಯಿಂದ ಹೊರಗೆ ಹೋಗಿದ್ದರು. ವಿಲ್ಮಾ ಅಂದು ಸಂಜೆ 5.10ಕ್ಕೆ ಬಿಕರ್ನಕಟ್ಟೆಯ ಚರ್ಚ್‌ಗೆ ತೆರಳಿ 7.10ಕ್ಕೆ ಮನೆಗೆ ಮರಳಿದ್ದರು. ಈ ವೇಳೆ ಡಾ. ಉರ್ಬನ್ ಮನೆಯಲ್ಲಿರಲಿಲ್ಲ. ರಾತ್ರಿ 11ಕ್ಕೆ ಕರೆ ಮಾಡಿದಾಗ ಅವರ ಮೊಬೈಲ್ ಸ್ವಿಚ್‌ ಆಫ್ ಬಂದಿತ್ತು. ಸ್ನೇಹಿತರು, ಸಂಬಂಧಿಕರಲ್ಲಿ ವಿಚಾರಿಸಿದರೂ ಮಾಹಿತಿ ಸಿಕ್ಕಿಲ್ಲ ಎಂದು ಪಾಂಡೇಶ್ವರ ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.‌

5.7 ಅಡಿ ಎತ್ತರ, ಕಪ್ಪು ಮೈಬಣ್ಣ, ದುಂಡು ಮುಖ, ಸಾಧಾರಣ ಶರೀರ ಹೊಂದಿದ್ದು, ಹೊರಗೆ ಹೋಗುವಾಗ ಕಪ್ಪು ಬಣ್ಣದ ಪ್ಯಾಂಟ್, ಕ್ರೀಮ್ ಮತ್ತು ಹಸಿರು ಬಣ್ಣದ ಅಂಗಿ ಧರಿಸಿದ್ದರು. ಕನ್ನಡ, ತುಳು, ಇಂಗ್ಲಿಷ್, ಹಿಂದಿ ಭಾಷೆ ಮಾತನಾಡುತ್ತಾರೆ. ಡಾ. ಉರ್ಬನ್ ಡಿಸೋಜರ ಬಗ್ಗೆ ಮಾಹಿತಿ ದೊರೆತವರು ಪಾಂಡೇಶ್ವರ ಪೊಲೀಸ್ ಠಾಣೆ (0824-2220518) ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News