ಸೆ.30: ದಾರುಸ್ವುಫ್ಫಾಹ್ ಸೆಂಟರ್ ಆಫ್ ಎಕ್ಸಲೆನ್ಸ್ ಉದ್ಘಾಟನೆ

Update: 2022-09-29 16:25 GMT

ಮಂಗಳೂರು, ಸೆ.29: ಅಸ್  ಸ್ವುಫ್ಫಾಹ್ ಫೌಂಡೇಶನ್ ವತಿಯಿಂದ ಸ್ಥಾಪಿಸಲಾಗಿರುವ ಅತ್ಯಾಧುನಿಕ ಇಸ್ಲಾಮಿಕ್  ಧಾರ್ಮಿಕ ಶಿಕ್ಷಣ ಕೇಂದ್ರ ದಾರು ಸ್ವುಫ್ಫಾಹ್ ಸೆಂಟರ್ ಆಫ್ ಎಕ್ಸಲೆನ್ಸ್ (ಸೆ.30) ಶುಕ್ರವಾರ ನಗರದ ಜಪ್ಪುವಿನಲ್ಲಿರುವ ಎಚ್ ಎಚ್ ಡೈಮಂಡ್ ಸಿಟಿಯಲ್ಲಿ ಶುಭಾರಂಭಗೊಳ್ಳಲಿದೆ. ಸಂಜೆ 7 ಗಂಟೆಗೆ ಖಾಝಿ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರು ಉದ್ಘಾಟಿಸಲಿದ್ದಾರೆ.

ದಾರು ಸ್ವುಫ್ಫಾಹ್ ನಲ್ಲಿ ಒಂದರಿಂದ 7ನೇ ತರಗತಿವರೆಗೆ ಇಂಗ್ಲಿಷ್ ಮಾಧ್ಯಮ ಮದ್ರಸಾ (ನರ್ಚರ್), ಮಹಿಳೆಯರಿಗೆ  3 ವರ್ಷಗಳ ಶರೀಯತ್ ಕೋರ್ಸ್ (ಸ್ಪಾರ್ಕ್ಲ್ ), ಹೆಣ್ಣು ಮಕ್ಕಳಿಗೆ 2 ವರ್ಷದ ಡಿಪ್ಲೋಮಾ (ಬ್ಲೂಮ್) , ಗಂಡು ಮಕ್ಕಳಿಗೆ 2 ವರ್ಷದ ಡಿಪ್ಲೋಮಾ (ತ್ರೈವ್), ಮಕ್ಕಳಿಗೆ ದಿನನಿತ್ಯ ಕ್ಲಾಸುಗಳು (ನೇವಿಗೇಟ್), ಮಹಿಳೆಯರಿಗೆ ವಾರದ ಕ್ಲಾಸುಗಳು ಹಾಗು ಇತರ ಇಸ್ಲಾಮಿಕ್ ತರಗತಿಗಳು, ಸಭೆಗಳು ನಡೆಯಲಿವೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

ಇದು ಮಂಗಳೂರಿನ ಪ್ರಪ್ರಥಮ ಅತ್ಯಾಧುನಿಕ ಇಸ್ಲಾಮಿಕ್ ಅಧ್ಯಯನ ಕೇಂದ್ರವಾಗಿದ್ದು ಇಂಗ್ಲಿಷ್ ಮಾಧ್ಯಮದಲ್ಲಿ ಡಿಜಿಟಲ್ ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ತರಬೇತಿ ನೀಡಲಾಗುತ್ತದೆ. ಹವಾನಿಯಂತ್ರಿತ ಕ್ಲಾಸ್ ರೂಮ್ ಗಳು, ಅನುಭವಿ ಭೋದಕರು ಹಾಗು ವೈವಿಧ್ಯಮಯ ಪಠ್ಯೇತರ ಚಟುವಟಿಕೆಗಳು ಇಲ್ಲಿರುತ್ತವೆ ಎಂದು ಸಂಸ್ಥೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News