ನಿಟ್ಟೆ ಡೇ ಕೇರ್ ಸೆಂಟರ್‌ನಲ್ಲಿ ವಿಶ್ವ ಹೃದಯ ದಿನಾಚರಣೆ

Update: 2022-09-29 17:48 GMT

ಕೊಣಾಜೆ: ನಿಟ್ಟೆ ಡೇ ಸೆಂಟರ್ ಮತ್ತು ಜಸ್ಟೀಸ್  ಕೆ.ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆಯು, ಇಂಡಿಯನ್ ಅಸೋಸಿಯೇಶನ್ ಆಫ್ ಕಾರ್ಡಿಯೋ ವ್ಯಾಸ್ಕುಲರ್ ಥೋರಾಸಿಕ್ ಸರ್ಜನ್‌  ಇದರ  ಸಹಯೋಗದೊಂದಿಗೆ 'ವಿಶ್ವ ಹೃದಯ' ದಿನಾಚರಣೆ ನಡೆಯಿತು.

ಕೆ.ಎಸ್. ಹೆಗ್ಡೆ ಮೆಡಿಕಲ್ ಅಕಾಡೆಮಿಯ ಡೀನ್ ಪ್ರೊ. ಪ್ರಕಾಶ್ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಡೀನ್,  ಆಧುನಿಕ ಜೀವನ ಶೈಲಿಯ ಅಭ್ಯಾಸಗಳು ಹೃದ್ರೋಗಗಳಿಗೆ  ಹೆಚ್ಚಿನ ಕಾರಣವಾಗಿದೆ. ಆದ್ದರಿಂದ, ಆರೋಗ್ಯಕರ ನಿಯಮಿತ ಜೀವನವನ್ನು ಕಾಪಾಡಿಕೊಳ್ಳಲು ಜನರು ತಮ್ಮ ಜೀವನಶೈಲಿಯನ್ನು ಬದಲಾಯಿಸಿಕೊಳ್ಳಬೇಕು ಮತ್ತು  ಆಹಾರ ಪದ್ಧತಿಯನ್ನು  ಅಳವಡಿಸಿಕೊಳ್ಳಬೇಕು. ಆರೋಗ್ಯಕರ  ಚಟುವಟಿಕೆ ಗಳು ಯಾವುದೇ ರೋಗವನ್ನು ತಡೆಗಟ್ಟಬಹುದು ಮತ್ತು ನಾವು ನಮ್ಮ ದೇಹವನ್ನು ಹೃದಯ ಅಥವಾ ಇತರ ಯಾವುದೇ ಕಾಯಿಲೆಗಳಿಂದ ಕಾಪಾಡಿಕೊಳ್ಳಬಹುದು ಎಂದು ತಿಳಿಸಿದರು.

ಹೃದ್ರೋಗ ಶಸ್ತ್ರಚಿಕಿತ್ಸಕರಾದ  ಡಾ.ಎ.ಜಿ.ಜಯಕೃಷ್ಣನ್ ಮತ್ತು ಹೃದ್ರೋಗ ತಜ್ಞರಾದ  ಡಾ..ಬಸವರಾಜ ಉಟಗಿ ಇವರು ಈ ವಿಶೇಷ ದಿನವನ್ನು ಆಚರಿಸುವ ಮಹತ್ವವನ್ನು ತಿಳಿಸುತ್ತಾ  ಸಂಬಂಧಿ ಕಾಯಿಲೆಗಳ ಬಗ್ಗೆ ಸಾರ್ವಜನಿಕ ರಲ್ಲಿ ಅರಿವು ಮೂಡಿಸುವ ಮೂಲಕ ಹೃದ್ರೋಗಕ್ಕೆ ತುತ್ತಾಗುವ ಅಪಾಯವನ್ನು ಕಡಿಮೆ ಮಾಡಬಹುದು ಮತ್ತು ಹೃದ್ರೋಗವನ್ನು ತಡೆಗಟ್ಟಬಹುದು ಎಂದು ತಿಳಿಸಿದರು.

ಕ್ಷೇಮ ವಿಭಾಗದ ಉಪ ಡೀನ್ ಪ್ರೊ. ಜಯಪ್ರಕಾಶ್ ಶೆಟ್ಟಿ, ಸಿಟಿವಿಎಸ್ ವಿಭಾಗದ ಮುಖ್ಯಸ್ಥರಾದ  ಡಾ.ಗೋಪಾಲಕೃಷ್ಣ ಮೂಡಿತ್ತಾಯ, ಹೃದ್ರೋಗ ವಿಭಾಗದ ಡಾ.ನರೇಶ್‌ಚಂದ್ ಹೆಗ್ಡೆ ಮತ್ತು ಡಾ.ದಿಲೀಪ್ ಜಾನಿ, ಹೃದ್ರೋಗ ಅರಿವಳಿಕೆ ತಜ್ಞರಾದ  ಡಾ.ಮಂಜುನಾಥ್ ಆರ್.ಕಾಮತ್ ಇವರು ಉಪಸ್ಥಿತರಿದ್ದರು.

ಡಾ.ವಿಕ್ರಂ ಶೆಟ್ಟಿಯವರು ವಂದಿಸಿದರು.ಡಾ.ದೀಕ್ಷಾ ಕಾರ್ಯಕ್ರಮ ನಿರೂಪಿಸಿದರು. ಸುಮಾರು  40 ಕ್ಕೂ ಹೆಚ್ಚಿನ ಜನರು ಹೃದಯ ತಪಾಸಣೆಗಾಗಿ ಈ ದಿನ ಘೋಷಿಸಲಾಗಿರುವ ವಿಶೇಷ ಪ್ಯಾಕೇಜ್‌ಗಳ ಅವಕಾಶವನ್ನು ಪಡೆದುಕೊಂಡಿರುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News