×
Ad

ಉತ್ತರಪ್ರದೇಶ: ಮಹಿಳೆಯ ಮೇಲೆ ಅತ್ಯಾಚಾರ, ಮೂವರು ವೈದ್ಯರ ವಿರುದ್ಧ ಪ್ರಕರಣ ದಾಖಲು

Update: 2022-09-29 23:39 IST

ಬಸ್ತಿ,ಸೆ.29: ಇಲ್ಲಿಯ ಆಸ್ಪತ್ರೆಯೊಂದರ ಮೂವರು ವೈದ್ಯರ ವಿರುದ್ಧ ಪೊಲೀಸರು ಸಾಮೂಹಿಕ ಅತ್ಯಾಚಾರ ಪ್ರಕರಣವನ್ನು ದಾಖಲಿಸಿದ್ದಾರೆ.ಬಸ್ತಿ ಸರ್ದಾರ್ ಕೊತ್ವಾಲಿಯಲ್ಲಿನ ಕೈಲಿ ಆಸ್ಪತ್ರೆಯ ವೈದ್ಯನೋರ್ವ ಸಾಮಾಜಿಕ ಮಾಧ್ಯಮಗಳ ಮೂಲಕ ಲಕ್ನೋದ ಯುವತಿಯೋರ್ವಳ ಗೆಳೆತನ ಬೆಳೆಸಿಕೊಂಡಿದ್ದ. ಆ.10ರಂದು ತನ್ನನ್ನು ಆಸ್ಪತ್ರೆಯಲ್ಲಿ ಭೇಟಿಯಾಗುವಂತೆ ಆತ ಯುವತಿಗೆ ಸೂಚಿಸಿದ್ದ. 

ಅಲ್ಲಿಂದ ಆಕೆಯನ್ನು ತನ್ನ ಹಾಸ್ಟೆಲ್ ರೂಮ್ಗೆ ಕರೆದೊಯ್ದಿದ್ದ,ಅಲ್ಲಿ ಆತ ಮತ್ತು ಆತನ ಇಬ್ಬರ ಸಹೋದ್ಯೋಗಿಗಳು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ ಎಂದು ಆರೋಪಿಸಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News