ಸಾಯಿ ಶಕ್ತಿ ಕಲಾ ಬಳಗ ನಾಟಕ- ಯಕ್ಷಗಾನ ಕೇಂದ್ರ ಶುಭಾರಂಭ

Update: 2022-09-30 03:37 GMT

ಮಂಗಳೂರು: ಊರ್ವ ಚಿಲಿಂಬಿ ಶ್ರಿ ಶಿರಡಿ ಸಾಯಿಬಾಬಾ ಮಂದಿರದಲ್ಲಿ ನವರಾತ್ರಿಯ ಪರ್ವಕಾಲದಲ್ಲಿ ಸಾಯಿಶಕ್ತಿ ಕಲಾ ಬಳಗ ನಾಟಕ - ಯಕ್ಷಗಾನ ಕಲಿಕಾ ಕೇಂದ್ರ ಶುಭಾರಂಭ ಗೊಂಡಿತು. ಖ್ಯಾತ ಯಕ್ಷಗಾನ ಭಾಗವತ ,ಸಂಘಟಕ ಸತೀಶ್ ಶೆಟ್ಟಿ ಪಟ್ಲ ಅವರು ಕಲಿಕಾ ಕೇಂದ್ರದ ಉದ್ಘಾಟನೆ ಮಾಡಿದರು.

"ನಗರ ಮಧ್ಯದಲ್ಲಿ ರಂಗಭೂಮಿ ಹಾಗೂ ಯಕ್ಷಗಾನ ಕಲೆಯನ್ನು ಸಮೃದ್ದಿ ಗೊಳಿಸುವಲ್ಲಿ ಕಲಾ ಪೋಷಕ ದಂಪತಿಗಳಾದ  ವಿಶ್ವಾಸ್ ಕುಮಾರ್ ದಾಸ್ ಹಾಗೂ ಲಾವಣ್ಯ ಅವರ ಕಲಾಸಕ್ತಿಯನ್ನು ಶ್ಲಾಘಿಸಿ ಶುಭ ಹಾರೈಸಿದರು.

ಮಾಜಿ ಶಾಸಕ ಜೆ.ಆರ್.ಲೋಬೊ ಹಾಗೂ ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಬಿ.ಕರ್ಕೇರ ಅವರು  ಶುಭಾಸಂಶನೆ ಮಾಡಿದರು. ಯಕ್ಷಗುರು ರಕ್ಷಿತ್ ಶೆಟ್ಟಿ ಪಡ್ರೆ ಉಪಸ್ಥಿತರಿದ್ದರು.

ಸಾಯಿ ಶಕ್ತಿ ಕಲಿಕಾ ಕೇಂದ್ರದ ನಾಟಕ ನಿರ್ದೇಶಕ ಕದ್ರಿ ನವನೀತ ಶೆಟ್ಟಿ ಅವರ ಗುರು, ನಿವೃತ್ತ ಶಿಕ್ಷಕ, ಹಿರಿಯ ರಂಗ ನಟ, ನಾಟಕಕಾರ, ನಿರ್ದೇಶಕ ಶಂಭು ಶೆಟ್ಟಿ ಅಶೋಕನಗರ ಹಾಗೂ ಯಕ್ಷಗಾನ ನಿರ್ದೇಶನ ಮಾಡಲಿರುವ  ರಕ್ಷಿತ್ ಶೆಟ್ಟಿ ಪಡ್ರೆ  ಅವರ ಗುರು ಗಣೇಶಪುರ ಗಿರೀಶ ನಾವಡ ಅವರನ್ನು " ಸಾಯಿ ಶಕ್ತಿ ದಸರಾ ಪ್ರಶಸ್ತಿ - 2022 ನೀಡಿ ಗೌರವಿಸಲಾಯಿತು. 

ಸಾಯಿ ಮಂದಿರದ ಆಡಳಿತ ಧರ್ಮದರ್ಶಿ ವಿಶ್ವಾಸ್ ಕುಮಾರ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ಅಕ್ಟೋಬರ್ 8 ರಿಂದ ನಾಟಕ ಹಾಗೂ ಯಕ್ಷಗಾನ ಉಚಿತ ತರಬೇತಿ ಆರಂಭವಾಗಲಿದ್ದು ಆಸಕ್ತರು ಶಿರಡಿ ಸಾಯಿಬಾಬಾ ಮಂದಿರರ ಕಛೇರಿಯನ್ನು ಸಂಪರ್ಕಿಸ ಬಹುದು ಎಂದ ಕೇಂದ್ರದ ಸಂಚಾಲಕಿ  ಲಾವಣ್ಯ ವಿಶ್ವಾಸ್ ಕುಮಾರ್ ದಾಸ್, ತರಬೇತಿ ಹೊಂದಿದ ಕಲಾವಿದರ ರಂಗಪ್ರವೇಶ  ಮಾಡಿಸಿ ಊರು ಪರವೂರುಗಳಲ್ಲಿ ಕಲಾ ಪ್ರದರ್ಶನ ನಡೆಸಲಾಗುವುದು ಎಂದು ತಿಳಿಸಿದ್ದಾರೆ. 

ಖ್ಯಾತ ಭಾಗವತ ಗಿರೀಶ್ ರೈ ಕಕ್ಕೆಪದವು ಬಳಗದವರಿಂದ "ಸಾಯಿ ಚರಿತಾಮೃತ" ಯಕ್ಷಗಾಯನ ನಡೆಯಿತು.

ಕಾರ್ಪೊರೇಟರ್ ಕೇಶವ್ ಮರೋಳಿ ಸ್ವಾಗತಿಸಿದರು‌. ಕದ್ರಿ ನವನೀತ ಶೆಟ್ಟಿ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News