ಮಂಗಳೂರು | ಇನ್‌ಲ್ಯಾಂಡ್ ಬ್ಯುನಸ್ ಐರಿಸ್‌ಗೆ ಶಿಲಾನ್ಯಾಸ

Update: 2022-09-30 07:01 GMT

ಮಂಗಳೂರು, ಸೆ.30: ನಗರದ ಬೆಂದೂರು ಲೋಬೊ ಲೇನ್‌ನಲ್ಲಿ ನಿರ್ಮಾಣಗೊಳ್ಳಲಿರುವ ಕರ್ನಾಟಕದ ಪ್ರತಿಷ್ಠಿತ ಕಟ್ಟಡ ನಿರ್ಮಾಣ ಸಂಸ್ಥೆ ಇನ್-ಲ್ಯಾಂಡ್ ಗ್ರೂಪ್‌ನ (IN-LAND GROUP) ನೂತನ ವಸತಿ ಸಮುಚ್ಚಯ ‘ಇನ್‌ಲ್ಯಾಂಡ್ ಬ್ಯುನಸ್ ಐರಿಸ್’ಗೆ (INLAND BUENOS AIRES) ಶುಕ್ರವಾರ ಬೆಳಗ್ಗೆ ಶಿಲಾನ್ಯಾಸ ನೆರವೇರಿತು.

'ಇನ್‌ಲ್ಯಾಂಡ್ ಬ್ಯುನಸ್ ಐರಿಸ್'ನ ಶಿಲಾನ್ಯಾಸದ ಪೂಜಾವಿಧಿಗಳನ್ನು ಬಾಳಂಭಟ್ ಮನೆತನದ ಗಿರಿಧರ್ ಭಟ್ ನೆರವೇರಿಸಿದರು. ಸೈಂಟ್ ಸೆಬಾಸ್ಟಿಯನ್ ಚರ್ಚ್ ಸಹಾಯಕ ಧರ್ಮಗುರು ರೋನ್ಶನ್ ಪಿಂಟೊ ಆಶೀರ್ವಚನ ನೀಡಿದರು. ಬಜಾಲ್ ನಂತೂರ್ ಬದ್ರಿಯಾ ಜುಮಾ ಮಸೀದಿಯ ಖತೀಬ್ ಪಿ.ಎಸ್.ಮುಹಮ್ಮದ್ ಕಾಮಿಲ್ ಸಖಾಫಿ ದುಆಗೈದರು.

ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್, ಮಂಗಳೂರು ಮನಪಾ ಮೇಯರ್‌ ಜಯಾನಂದ್ ಅಂಚನ್, ಉಪ ಮೇಯರ್ ಪೂರ್ಣಿಮಾ, ಮನಪಾ ಸದಸ್ಯರಾದ ನವೀನ್ ಡಿಸೋಜ, ಕಾವ್ಯಾ ನಟರಾಜ್, ಇನ್-ಲ್ಯಾಂಡ್ ಗ್ರೂಪ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್, ಸಂಸ್ಥೆಯ ನಿರ್ದೇಶಕರಾದ ಮೆಹರಾಜ್ ಯೂಸುಫ್, ವಹಾಜ್ ಯೂಸುಫ್, ಮಾರ್ಕೆಟಿಂಗ್ ಹೆಡ್ ಉಲ್ಲಾಸ್ ಕದ್ರಿ ಮತ್ತಿತರರು ಉಪಸ್ಥಿತರಿದ್ದರು.

ಅತ್ಯಾಧುನಿಕ ವಸತಿ ಸಮುಚ್ಚಯ

ಅತ್ಯಾಧುನಿಕ ನಾಲ್ಕು ಅಂತಸ್ತುಗಳ ಕಟ್ಟಡವಾಗಿ ತಲೆಯೆತ್ತಲಿರುವ ಇನ್‌ಲ್ಯಾಂಡ್ ಬ್ಯುನಸ್ ಐರಿಸ್ 2 ಮತ್ತು 3 ಬಿಚ್‌ಕೆ ಗಾತ್ರದ 36 ಅಪಾರ್ಟ್‌ಮೆಂಟ್‌ಗಳನ್ನು ಒಳಗೊಂಡಿರಲಿದೆ. 3 ಬಿಎಚ್‌ಕೆ ಅಪಾರ್ಟ್‌ಮೆಂಟ್ 1,540 ಚದರ ಅಡಿ ಮತ್ತು 2 ಬಿಎಚ್‌ಕೆ ಅಪಾರ್ಟ್‌ಮೆಂಟ್‌ಗಳು 945 ಚದರ ಅಡಿಯಿಂದ 1,195 ಚದರ ಅಡಿ ವಿಸ್ತೀರ್ಣವನ್ನು ಹೊಂದಿರಲಿವೆ.

ಇದನ್ನು ನಗರದಲ್ಲೇ ಅತ್ಯುತ್ತಮ ಸೌಲಭ್ಯಗಳನ್ನು ಬಯಸುವ ಪ್ರತಿಯೊಂದೂ ಕುಟುಂಬಕ್ಕೆ ಆದರ್ಶ ನಿವಾಸವನ್ನಾಗಿ ವಿನ್ಯಾಸಗೊಳಿಸಲಾಗಿದೆ. ಈ ಸುಂದರ ವಸತಿ ಸಮುಚ್ಚಯ ಪ್ರಮುಖ ಶಾಲೆಗಳು, ಶಾಪಿಂಗ್ ಸೆಂಟರ್‌ಗಳು, ಆರಾಧನಾ ತಾಣಗಳಿಗೆ ಅತ್ಯಂತ ಸಮೀಪದಲ್ಲಿದ್ದು, ಅನುಕೂಲಕರ ಸಾರಿಗೆ ಸೌಲಭ್ಯವಿದೆ. ಜೊತೆಗೆ ಮೇಲ್ವರ್ಗದ ವಸತಿ ಪ್ರದೇಶದ ಪ್ರಶಾಂತ ವಾತಾವರಣವನ್ನು ಹೊಂದಿದೆ.

ಸೈಂಟ್ ಆ್ಯಗ್ನೆಸ್ ಶಾಲೆ/ಕಾಲೇಜಿನಿಂದ ಕೇವಲ 250 ಮೀ. ಮತ್ತು ಸೈಂಟ್ ಅಲೋಶಿಯಸ್ ಕಾಲೇಜಿನಿಂದ ಎರಡು ಕಿ.ಮೀ. ಅಂತರದಲ್ಲಿದ್ದು, ಕದ್ರಿ ಮಾರುಕಟ್ಟೆಗೆ ನಡೆದುಕೊಂಡೇ ಹೋಗಬಹುದಾಗಿದೆ. ಸೈಂಟ್ ಸೆಬಾಸ್ಟಿಯನ್ಸ್ ಚರ್ಚ್ (300 ಮೀ.) ಮತ್ತು ಕದ್ರಿ ದೇವಸ್ಥಾನ (ಒಂದು ಕಿ.ಮೀ.)ದಂತಹ ಆರಾಧನಾ ತಾಣಗಳಿಗೆ ಸುಲಭವಾಗಿ ತಲುಪಬಹುದು. ಎಸ್‌ಸಿಎಸ್ ಆಸ್ಪತ್ರೆ, ಕೊಲಾಸೋ ಆಸ್ಪತ್ರೆ, ಸಿಟಿ ಆಸ್ಪತ್ರೆ, ತೇಜಸ್ವಿನಿ ಆಸ್ಪತ್ರೆ, ವಿಜಯಾ ನರ್ಸಿಂಗ್ ಹೋಮ್ ಮತ್ತು ಫಾ.ಮುಲ್ಲರ್ ಆಸ್ಪತ್ರೆಯಂತಹ ಪ್ರಮುಖ ಆಸ್ಪತ್ರೆಗಳು ಇನ್‌ಲ್ಯಾಂಡ್ ಬ್ಯುನಸ್ ಐರಿಸ್‌ನಿಂದ ಕೇವಲ ಒಂದು ಕಿ.ಮೀ.ಅಂತರದೊಳಗಿವೆ.

ಸ್ವಯಂಚಾಲಿತ ಎಲವೇಟರ್‌ಗಳು, ಜಿಮ್ನಾಸಿಯಂ ಮತ್ತು ಯೋಗ ಕೇಂದ್ರ, ವಿಶಾಲ ಲಾಬಿ, ರೆಟಿಕ್ಯುಲೇಟೆಡ್ ಗ್ಯಾಸ್ ಕನೆಕ್ಷನ್, ಮಕ್ಕಳ ಆಟದ ಸ್ಥಳ, ಜನರೇಟರ್ ಬ್ಯಾಕ್-ಅಪ್, 24 ಗಂಟೆಗಳ ಸಿಸಿಟಿವಿ ಭದ್ರತೆ, ಇಂಟರ್‌ಕಾಮ್ ಸೌಲಭ್ಯ ಮತ್ತು ಕಾರ್ ಪಾರ್ಕಿಂಗ್ ಸೇರಿದಂತೆ ಎಲ್ಲ ಅತ್ಯಾಧುನಿಕ ಸೌಲಭ್ಯಗಳನ್ನು ಯೋಜನೆಯು ಒಳಗೊಂಡಿದೆ. ಡಬಲ್ ಕೋಟ್ ಎಕ್ಸ್‌ಟೀರಿಯರ್ ಪ್ಲಾಸ್ಟರಿಂಗ್, ಆ್ಯಂಟಿ-ಫಂಗಲ್ ಎಕ್ಸ್‌ಟೀರಿಯರ್ ಎಮಲ್ಶನ್ ಪೇಂಟ್, ಮೆಲಾಮೈನ್-ಪಾಲಿಶ್ಡ್ ಮೇನ್ ಡೋರ್, ವಿಟ್ರಿಫೈಯ್ಡಿ ಫ್ಲೋರ್ ಟೈಲ್‌ಗಳು, ಸ್ಲೈಡಿಂಗ್ ಶಟರ್‌ಗಳೊಂದಿಗೆ ಯುಪಿವಿಸಿ/ಅಲ್ಯೂಮಿನಿಯಂ ವಿಂಡೋಗಳು ಮತ್ತು ಮಾಡ್ಯುಲರ್ ಸ್ವಿಚ್‌ಗಳು ಸೇರಿದಂತೆ ಅತ್ಯುತ್ತಮ ಗುಣಮಟ್ಟದ ನಿರ್ಮಾಣ ಸಾಮಗ್ರಿಗಳನ್ನು ಯೋಜನೆಯು ಬಳಸಿಕೊಳ್ಳಲಿದೆ. ಅತ್ಯಾಧುನಿಕ ನಿರ್ಮಾಣ ತಂತ್ರಜ್ಞಾನಗಳು ಮತ್ತು ಮ್ಯಾನೇಜ್‌ಮೆಂಟ್ ಪದ್ಧತಿಗಳನ್ನು ಬಳಸಿಕೊಂಡು ಸಾಧ್ಯವಿರುವ ಅತ್ಯಂತ ಸ್ವಲ್ಪ ಸಮಯದಲ್ಲಿ ಯೋಜನೆಯನ್ನು ಪೂರ್ಣಗೊಳಿಸುವ ಭರವಸೆಯನ್ನು ಇನ್-ಲ್ಯಾಂಡ್ ನೀಡುತ್ತದೆ ಎಂದು ಇನ್-ಲ್ಯಾಂಡ್ ಗ್ರೂಪ್ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್ ತಿಳಿಸಿದ್ದಾರೆ.

ಸಂಪರ್ಕ ವಿಳಾಸ:ಇನ್-ಲ್ಯಾಂಡ್ ಬಿಲ್ಡರ್ಸ್, ಮೂರನೇ ಮಹಡಿ, ಇನ್‌ಲ್ಯಾಂಡ್ ಆರ್ನೆಟ್, ನವಭಾರತ ಸರ್ಕಲ್, ಮಂಗಳೂರು-575001.

ವೆಬ್‌ಸೈಟ್: www.inlandbuilders.net,

ಇಮೇಲ್: info@inlandbuilders.net,

ಮೊಬೈಲ್: 9972089099, 9972014055

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News