ಮುಂಬೈ: ನೇಣು ಬಿಗಿದ ಸ್ಥಿತಿಯಲ್ಲಿ ಮಾಡೆಲ್‌ ಮೃತದೇಹ ಪತ್ತೆ

Update: 2022-09-30 05:58 GMT
Photo: Twitter/@MumbaiPolice

ಮುಂಬೈ: ಮುಂಬೈನ (Mumbai) ಅಂಧೇರಿ ಪ್ರದೇಶದ ಹೋಟೆಲ್ ಒಂದರ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ 40 ವರ್ಷದ ಮಾಡೆಲ್ (model) ಮೃತದೇಹ ಪತ್ತೆಯಾಗಿದೆ.

ಮಾಡೆಲ್ ಬುಧವಾರ ರಾತ್ರಿ 8 ಗಂಟೆ ಸುಮಾರಿಗೆ ಹೊಟೇಲ್‌ನಲ್ಲಿ ರಾತ್ರಿಯ ಊಟಕ್ಕೂ ಆರ್ಡರ್ ಮಾಡಿದ್ದರು ಎಂದು ಪೊಲೀಸರು ಹೇಳಿದ್ದಾರೆ.

ಗುರುವಾರ, ಮನೆಗೆಲಸದ ಸಿಬ್ಬಂದಿ ಪದೇ ಪದೇ ಕರೆ ಮಾಡಿದರೂ ಬಾಗಿಲು ತೆರೆದಿರಲಿಲ್ಲ. ಈ ಹಿನ್ನೆಲೆಯಲ್ಲಿ ಹೋಟೆಲ್ ಮ್ಯಾನೇಜರ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಹೋಟೆಲ್ ತಲುಪಿದ ಪೊಲೀಸರು ಮಾಸ್ಟರ್ ಕೀಯೊಂದಿಗೆ ಕೊಠಡಿಯನ್ನು ತೆರೆದಾಗ ಮಾಡೆಲ್ ಶವ ಫ್ಯಾನ್‌ಗೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.

ಘಟನೆ ನಡೆದ ಸ್ಥಳದಿಂದ ಪೊಲೀಸರು ಸುಸೈಡ್ ನೋಟ್ ಅನ್ನೂ ವಶಪಡಿಸಿಕೊಂಡಿದ್ದಾರೆ.

"ನನ್ನನ್ನು ಕ್ಷಮಿಸಿ, ಇದಕ್ಕೆ ಯಾರೂ ಕಾರಣರಲ್ಲ, ನಾನು ಸಂತೋಷವಾಗಿಲ್ಲ, ನನಗೆ ಶಾಂತಿ ಬೇಕು" ಎಂದು ಪತ್ರದಲ್ಲಿ ಮಾಡೆಲ್ ಬರೆದಿದ್ದಾರೆ ಎಂದು ndtv.com ವರದಿ ಮಾಡಿದೆ.

ವರ್ಸೋವಾ ಪೊಲೀಸರು ಎಡಿಆರ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಆರೆಸ್ಸೆಸ್ ನಿಷೇಧ ಮಾಡಿ ಎನ್ನುವುದು ದುರ್ದೈವ: ಸಿಎಂ ಬೊಮ್ಮಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News