ಯುವಕ ಕಾಣೆ
Update: 2022-10-01 21:05 IST
ಮಂಗಳೂರು, ಅ.1: ನಗರದ ಪಂಪ್‌ವೆಲ್‌ನ ಮಾರ್ಕೆಟಿಂಗ್ ಸಂಸ್ಥೆಯೊಂದರಲ್ಲಿ ಸೇಲ್ಸ್ ಎಗ್ಸಿಕ್ಯೂಟಿವ್ ಆಗಿದ್ದ ಉತ್ತರ ಕನ್ನಡ ಜಿಲ್ಲೆಯ ಅಂಕೋಲದ ರಮಾನಂದ ನಾಯಕ್ (38)ಎಂಬವರು ಸೆ.21ರಿಂದ ಕಾಣೆಯಾದ ಬಗ್ಗೆ ನಗರದ ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಿಳಿ ಮೈಬಣ್ಣ, 6 ಅಡಿ ಎತ್ತರ, ಸಾಧಾರಣ ಶರೀರ, ದುಂಡು ಮುಖ ಹಾಗೂ ನೀಲಿ ಬಣ್ಣದ ಶಟ್ ಮತ್ತು ಪ್ಯಾಂಟ್ ಧರಿಸಿದ್ದು, ಕನ್ನಡ, ಹಿಂದಿ, ಇಂಗ್ಲಿಷ್ ಭಾಷೆ ಮಾತನಾಡುತ್ತಾರೆ. ಈ ವ್ಯಕ್ತಿಯ ಬಗ್ಗೆ ಮಾಹಿತಿ ದೊರೆತಲ್ಲಿ ಪೊಲೀಸ್ ಕಂಟ್ರೋಲ್ ರೂಂ.ನಂ: 0824- 2220800, ಠಾಣೆಯ ದೂ.ಸಂ: 0824-2220529, ಠಾಣಾಧಿಕಾರಿಯ ಮೊ.ಸಂ: 9480805354 ಅಥವಾ ಕಂಕನಾಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.