ಪಿ.ಎ. ಫಾರ್ಮಸಿ ಕಾಲೇಜು ವತಿಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ
ಮಂಗಳೂರು: ನಡುಪದವಿನ ಪಿ.ಎ. ಕಾಲೇಜ್ ಆಫ್ ಫಾರ್ಮಸಿಯು ಸಿಟಿ ಪಾಲಿಕ್ಲಿನಿಕ್ ದೇರಳಕಟ್ಟೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರ್ಕಾಣ ಮತ್ತು ಬದ್ರಿಯಾ ಜುಮಾ ಮಸೀದಿ ಅರ್ಕಾಣ ಇವರ ಸಹಭಾಗಿತ್ವದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರ್ಕಾಣದಲ್ಲಿ “ವಿಶ್ವ ಔಷಧ ತಜ್ಞರ ದಿನ”ದ ಪ್ರಯುಕ್ತ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಹಮ್ಮಿಕೊಳ್ಳಲಾಯಿತು.
ಶಿಬಿರವನ್ನು ಉದ್ಘಾಟಿಸಿ ಮಾತನಾಡಿದ ಸ.ಹಿ.ಪ್ರಾಥಮಿಕ ಶಾಲೆಯ ಆಡಳಿತ ಮಂಡಳಿ ಅಧ್ಯಕ್ಷ ಅಬ್ದುರ್ರಝಾಕ್ "ಆರೋಗ್ಯವು ದೇವನು ನೀಡಿದ ದೊಡ್ಡ ಅನುಗ್ರಹವಾಗಿದೆ ಅದನ್ನು ಕಾಪಾಡುವುದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ರೋಗ ಬಂದರೆ ಅದನ್ನು ನಿರ್ಲಕ್ಷಿಸದೆ ಕೂಡಲೇ ತಜ್ಞ ವ್ಯೆದ್ಯರಿಂದ ಚಿಕಿತ್ಸೆ ಪಡೆಯಬೇಕು" ಎಂದು ತಿಳಿಸಿದರು.
ಅರ್ಕಾಣ ಗ್ರಾಮದ ಪಂಚಾಯತ್ ಸದಸ್ಯರಾದ ಶಫೀಕ್ ಅಹ್ಮದ್, ಸಿರಾಜುದ್ದೀನ್, ಸಿಟಿ ಪಾಲಿಕ್ಲಿನಿಕ್ ಇದರ ವ್ಯೆದ್ಯೆ ಡಾ. ಸಲೀಮಾ ಬಾನು ವ್ಯೆದ್ಯಕೀಯ ಶಿಬಿರಕ್ಕೆ ಶುಭಹಾರ್ಯೆಸಿದರು. ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷ ಅಬ್ಬಾಸ್, ಪಂಚಾಯತ್ ಸದಸ್ಯೆಯರಾದ ಸುನೀತಾ ಸಲ್ದಾನ, ಸುಮಯ್ಯ ಉಮರ್, ಮುಖ್ಯೋಪಾಧ್ಯಾಯಿನಿ ಅವ್ಜಿತಾ ಡಿ ಸೋಜ, ಸಿಟಿ ಪಾಲಿಕ್ಲಿನಿಕ್‍ನ ವ್ಯೆದ್ಯ ಡಾ. ಝೈನುದ್ಧೀನ್ ಉಪಸ್ಥಿತರಿದ್ದರು.
ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಂಶುಪಾಲ ಡಾ. ಸಲೀಮುಲ್ಲಾ ಖಾನ್ ಅಧ್ಯಕ್ಷೀಯ ಭಾಷಣದಲ್ಲಿ ಅರೋಗ್ಯ ಕ್ಷೇತ್ರದಲ್ಲಿ ಔಷಧ ತಜ್ಞರು ನಿರ್ವಹಿಸುತ್ತಿರುವ ಪಾತ್ರವನ್ನು ವಿವರಿಸಿದರು. ಆರಂಭದಲ್ಲಿ ಬದ್ರಿಯಾ ಮಸೀದಿಯ ಖತೀಬರಾದ ಮೌಲಾನಾ ಸಲೀಮ್ ಅರ್ಷದಿ ಪ್ರಾರ್ಥನೆ ನೆರವೇರಿಸಿದರು.
ಡಾ. ಮುಹಮ್ಮದ್ ಮುಬೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮನೋಹರ ನಾಯಕ್ ವಂದಿಸಿದರು. ನಿಶ್ಮಿತಾ ಕಾರ್ಯಕ್ರಮ ನಿರೂಪಿಸಿದರು. ರೋಗಿಗಳ ಆರೋಗ್ಯ ತಪಾಸಣೆ ನಡೆಸಿ ಉಚಿತವಾಗಿ ಔಷಧಿಗಳನ್ನು ನೀಡಲಾಯಿತು.