ಬಜ್ಪೆ: ರಕ್ತದಾನ ಶಿಬಿರ

Update: 2022-10-02 01:51 GMT

ಬಜ್ಪೆ, ಅ.1: ಬ್ಲಡ್ ಹೆಲ್ತ್ ಕೇರ್ ಕರ್ನಾಟಕ, ಲಯನ್ಸ್, ಆರೋಗ್ಯ ಕೇಂದ್ರ ಬಜ್ಪೆ ಮತ್ತು ಬಜ್ಪೆ ಸೇವಾ ಕೇಂದ್ರ ಇದರ ಸಂಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವು ಅನ್ಸಾರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಶನಿವಾರ ನಡೆಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಬಜ್ಪೆ ಗ್ರಾಮ ಪಂ. ಮಾಜಿ ಸದಸ್ಯ, ಸಾಮಾಜಿಕ ಕಾರ್ಯಕರ್ತ ಸಿರಾಜ್ ಬಜ್ಪೆ, ದಾನಗಳಲ್ಲಿ ಶ್ರೇಷ್ಠ ದಾನ ರಕ್ತ ದಾನ. ರಕ್ತಕ್ಕೆ ಜಾತಿ, ಧರ್ಮ ಇಲ್ಲ. ನಾವೆಲ್ಲರೂ ಒಂದೇ. ನಮಗೆ ಬೇಕಿರುವುದು ಒಂದೇ ಬಣ್ಣದ ರಕ್ತ ಎಂದು ಹೇಳಿ ಆಯೋಜಕರನ್ನು ಅಭಿನಂದಿಸಿದರು.

ಕಾರ್ಯಕ್ರಮವನ್ನು  ಬಜ್ಪೆ ಎಂಜೆಎಂ ಜುಮಾ ಮಸೀದಿಯ ಗುರುಗಳಾದ ಇಸ್ಮಾಯೀಲ್ ಮನ್ಸೂರ್ ಸ ಅದಿ ಅಲ್ ಕಾಮಿಲ್ ಉದ್ಘಾಟಿಸಿ, ಮಾತನಾಡಿದರು.

ಈ ಸಂದರ್ಭದಲ್ಲಿ ಬ್ಲಡ್ ಹೆಲ್ತ್ ಕೇರ್ ಅಧ್ಯಕ್ಷರಾದ ನಝೀರ್ ಹುಸೇನ್, ಮುಲ್ಕಿ ಮೂಡಬಿದ್ರೆ ಬ್ಲಾಕ್ ಕಾಂಗ್ರೆಸ್ ಐಟಿ ಸೆಲ್ ಅಧ್ಯಕ್ಷ ನಿಸಾರ್ ಕರಾವಳಿ, ಡಾ. ಶಂಕರ್ ನಾಗ್, ಬಜ್ಪೆ ದಲಿತ ಸಂಘ ಸಮಿತಿಯ ಸಂಚಾಲಕ ಸತೀಶ್, ಉದ್ಯಮಿ ಪ್ರಕಾಶ್ ಸಿಮ್ ಸನ್, ಲಯನ್ ಆಶಾ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News