×
Ad

ಮಂಗಳೂರು: ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‍ನಲ್ಲಿ ‘ಗಾಂಧಿ ಜಯಂತಿ’

Update: 2022-10-02 12:50 IST

ಮಂಗಳೂರು: “ಸರಳ ಜೀವನ, ಉನ್ನತ ಚಿಂತನೆಯ ಮೂಲಕ ಮಹಾತ್ಮರು ಅಮರರಾದರು. ನ್ಯಾಯ, ನೀತಿ, ಪ್ರಾಮಾಣಿಕತೆ, ಸತ್ಯ, ಅಹಿಂಸೆ, ಸತ್ಯಾಗ್ರಹ ಮೊದಲಾದ ಮೌಲ್ಯಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಮಹಾತ್ಮರು ಹಾಕಿಕೊಟ್ಟ ಸನ್ಮಾರ್ಗದಲ್ಲಿ ಮುನ್ನಡೆದು ಅವರಿಗೆ ಗೌರವವನ್ನು ಸಲ್ಲಿಸೋಣ. ಮಹಾತ್ಮ ಗಾಂಧೀಜಿಯವರ ಬದುಕೆ ನಮಗೆ ದಾರಿದೀಪ. ಲಾಲ್ ಬಹಾದ್ದೂರ್ ಶಾಸ್ತ್ರಿಯವರು ಹಸಿರು ಕ್ರಾಂತಿ ಹಾಗೂ ಕ್ಷೀರಕ್ರಾಂತಿಯ ಮೂಲಕ ಅಮೂಲಾಗ್ರ ಬದಲಾವಣೆಯನ್ನು ತಂದು ದೇಶದಲ್ಲಿ ಕ್ರಾಂತಿಯನ್ನು ಮೂಡಿಸಿದರು. ಅವರ ಆದರ್ಶಗಳನ್ನು ನಾವು ನಿತ್ಯವೂ ರೂಢಿಸಿಕೊಳ್ಳೋಣ” ಎಂದು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‍ನ ಪ್ರಾಂಶುಪಾಲರಾದ ವಂ. ರೋಬರ್ಟ್ ಡಿ’ಸೋಜಾ ಹೇಳಿದರು.

ಅವರು ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‍ನಲ್ಲಿ ಆಯೋಜಿಸಿದ ಮಹಾತ್ಮ ಗಾಂಧೀಜಿಯವರ 153ನೇ ಹುಟ್ಟುಹಬ್ಬದ ಆಚರಣೆಯ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಿದ್ದರು.

ವೇದಿಕೆಯಲ್ಲಿ ಉಪಪ್ರಾಂಶುಪಾಲೆ ಅನಿತಾ ಥೋಮಸ್‍ ಉಪಸ್ಥಿತರಿದ್ದರು. ಶಹಾನ್ ಲೋಬೊ ‘ಗಾಂಧೀ ಜಯಂತಿ’ಯ ಪ್ರಾಮುಖ್ಯತೆಯನ್ನು ಹಾಗೂ ದೀಪ್ ಮಸ್ಕರೇನ್ಹಸ್ ‘ಲಾಲ್ ಬಹಾದೂರ್ ಶಾಸ್ತ್ರಿಯವರ ಜನ್ಮದಿನದ ಮಹತ್ವವನ್ನು ತಿಳಿಸಿದರು.

ವಿದ್ಯಾರ್ಥಿಗಳಾದ ಅಮ್ನ ಜಾವೇದ್, ಸಾಯಿ ಪ್ರತೀಕ್ಷ, ಅರ್ಶ್ ಬಾವಾ ಮತ್ತು ಮೆವಿಟಾ ರೊಡ್ರಿಗಸ್ ಸರ್ವಧರ್ಮ ಪ್ರಾರ್ಥನೆಯನ್ನು ನಡೆಸಿದರು. ಸಾನ್ಸಿಯಾ ಪಿಂಟೊ ಸ್ವಾಗತಿಸಿ, ಪ್ರಣವಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕರಾದ ವಿವಿಟಾ ಡಿ’ಸೋಜ ಕಾರ್ಯಕ್ರಮವನ್ನು ಸಂಯೋಜಿಸಿದರು. ಐವನ್ ಮಸ್ಕರೇನ್ಹಸ್, ರೋಶನ್ ಕೊರ್ಡೊರೊ ಮತ್ತು ಗಿರೀಶ್ ಸಹಕರಿಸಿದರು. ಅನಿಯಾ ಮಸ್ಕರೇನ್ಹಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News