ಉಳ್ಳಾಲ: ಫಿಟ್ ಇಂಡಿಯಾ ಫ್ರೀಡಂ ರನ್ ಕಾರ್ಯಕ್ರಮ

Update: 2022-10-02 09:58 GMT

ಉಳ್ಳಾಲ:  ಸ್ವಚ್ಛತೆಗೆ ಕೇಂದ್ರ ಸರ್ಕಾರ ಒತ್ತು ನೀಡುತ್ತಿದೆ. ಸ್ವಚ್ಛ ಭಾರತ ನಮ್ಮದಾಗಬೇಕು. ಸ್ವಚ್ಛ ಇದ್ದರೆ ಮಾತ್ರ ನಮ್ಮ ಆರೋಗ್ಯ ಕಾಪಾಡಬಹುದು. ವಿದ್ಯಾರ್ಥಿಗಳು ಬಹಳ ಉತ್ಸಾಹದಿಂದ ಭಾಗವಹಿಸಿದ್ದು ಸ್ವಾಗತಾರ್ಹ. ಅದೇ ರೀತಿ ಕಾರ್ಯ ನಿರ್ವಹಣೆ ಮಾಡಿ ಸ್ವಚ್ಛ ಭಾರತ ನಿರ್ಮಾಣ ಮಾಡಬೇಕು. ‌ಇದು ಒಂದು ತಿಂಗಳ ಕಾಲ ನಡೆಯುತ್ತದೆ. ಇದರ ಆರಂಭ ಉಳ್ಳಾಲದಿಂದ ಆಗಲಿದೆ ಎಂದು ಅಪರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ ಎಚ್.  ಹೇಳಿದರು.

ಅವರು ಉಳ್ಳಾಲ ನಗರ ಸಭೆ ವತಿಯಿಂದ ಗಾಂಧಿ ಜಯಂತಿ ಪ್ರಯುಕ್ತ  ಉಳ್ಳಾಲ ಮಹಾತ್ಮ ಗಾಂಧಿ ರಂಗ ಮಂದಿರ ವಠಾರದಲ್ಲಿ ಭಾನುವಾರ ನಡೆದ ಫಿಟ್ ಇಂಡಿಯಾ ಫ್ರೀಡಂ ರನ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಈ ಸಂದರ್ಭ ಡಿಐಜಿ ಕೋಸ್ಟ್ ಗಾರ್ಡ್ ವೆಂಕಟೇಶ್ ಮಾತನಾಡಿದರು.

ಕಾರ್ಯಕ್ರಮ ದಲ್ಲಿ ಯೆನೆಪೋಯ ಎನ್ ಎಸ್ ಎಸ್ ಪ್ರೋಗ್ರಾಂ ಕೋ ಆರ್ಡಿನೇಟರ್ ಡಾ.ಅಶ್ವಿನಿ ಶೆಟ್ಟಿ  ,ಡೀನ್ ಡಾ. ಸುನೀತಾ ಸಲ್ಡಾನ, ನಗರ ಸಭೆ ಪೌರಾಯುಕ್ತ ವಿದ್ಯಾ ಎಂ ಕಾಳೆ , ಆರೋಗ್ಯ ಅಧಿಕಾರಿ ರವಿ ಕೃಷ್ಣಾ ನೆಹರೂ ಯುವ ಕೇಂದ್ರ ಜಿಲ್ಲಾ ಯುವ ಅಧಿಕಾರಿ ರಘುವೀರ್ ಸೂಟರ್ ಪೇಟೆ, ಆಡಳಿತಾಧಿಕಾರಿ ಜಗದೀಶ್ ಕೆ ಉಪಸ್ಥಿತರಿದ್ದರು.

ಎಬಿ ಶೆಟ್ಟಿ ಹಾಗೂ ಯೆನೆಪೋಯ ಎಲೈಡ್ ಸೈನ್ಸ್ ವಿದ್ಯಾರ್ಥಿಗಳು ಭಾಗವಹಿಸಿ ಕಸ ಹೆಕ್ಕುವ ಮೂಲಕ ಉಳ್ಳಾಲ ಬೀಚ್ ಸ್ವಚ್ಛತೆ ಆಂದೋಲನ ನಡೆಸಿದರು. ಇದೇ ಸಂದರ್ಭದಲ್ಲಿ ನಗರ ಸಭೆ ವತಿಯಿಂದ ಗಾಂಧಿ ಜಯಂತಿ ಆಚರಣೆ ಮಾಡಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News