​ಉಳ್ಳಾಲ: ಸಂಯುಕ್ತ ಭಾರತ ಸ್ವಚ್ಛ ಸಮುದ್ರ ಸುರಕ್ಷಿತ ಅಭಿಯಾನ

Update: 2022-10-02 10:06 GMT

ಉಳ್ಳಾಲ: ಸ್ವಚ್ಛತೆಗೆ ನಮ್ಮ ಮೊದಲ ಆದ್ಯತೆ ನೀಡಬೇಕು. ಪರಿಸರ ಸ್ವಚ್ಛ ಇದ್ದರೆ ಮಾತ್ರ ಆರೊಗ್ಯವಂತ ಸಮಾಜದಲ್ಲಿ ಬದುಕಬಹುದು. ಸಮುದ್ರ ಬದಿ ಕಸ ಕಡ್ಡಿ ಹಾಕುವ ಬದಲು ಅದನ್ನು  ಬೇರೆ ವ್ಯವಸ್ಥೆ ಮಾಡಬೇಕು ಎಂದು ಶಿಕ್ಷಣ ಅಧಿಕಾರಿ ಪ್ರಶಾಂತ್ ಹೇಳಿದರು.

ಅವರು ಉಳ್ಳಾಲದ ಉಳಿಯದಲ್ಲಿ  ನಗರ ಸಭೆ ಹಾಗೂ ಸ್ಥಳೀಯ ಶಿಕ್ಷಣ ಸಂಸ್ಥೆ ಗಳ ಮತ್ತು ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ನಡೆದ ಸ್ವಚ್ಛತೆಗಾಗಿ ಸಂಯುಕ್ತ ಭಾರತ ಸ್ವಚ್ಛ ಸಮುದ್ರ ಸುರಕ್ಷಿತ ಸಮುದ್ರ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಈ ಸಂದರ್ಭ ದಲ್ಲಿ ಸ್ವಚ್ಛತಾ ಅಭಿಯಾನ ದ ಲ್ಲಿ ಪಾಲ್ಗೋಂಡ ವಿವಿಧ ಸಂಘ ಸಂಸ್ಥೆಗಳ ಗಳಿಗೆ ಅಭಿನಂದನಾ ಪತ್ರ ನೀಡಲಾಯಿತು. ಕಾರ್ಯಕ್ರಮ ದಲ್ಲಿ ಕಿಶೋರ್ ಅತ್ತಾವರ ನಗರ ಸಭೆ ಪೌರಾಯುಕ್ತ ವಿದ್ಯಾ ಎಂ ಕಾಳೆ, ಕೌನ್ಸಿಲರ್ ಮುಹಮ್ಮದ್ ಮುಕಚೇರಿ, ಖಲೀಲ್ ಉಳ್ಳಾಲ ನಾಡದೋಣಿ ಮೀನು ಗಾರರ ಸಂಘದ ಅಧ್ಯಕ್ಷ  ಹನೀಫ್  ಉಪಸ್ಥಿತರಿದ್ದರು.

ಕೆಎಂಕೆ ಮಂಜನಾಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News