ಬ್ಯಾರಿ ಭಾಷಾ ದಿನಾಚರಣೆ: ಯೂಟ್ಯೂಬ್ ನಲ್ಲಿ ನೇರ ಪ್ರಸಾರ

Update: 2022-10-02 13:23 GMT

ಮಂಗಳೂರು: ಸೌಂಡ್ ವೇವ್ ಆಡಿಯೋ ಆ್ಯಂಡ್ ವೀಡಿಯೋ ರೆಕಾರ್ಡಿಂಗ್ ಸ್ಟುಡಿಯೋ ವೆಲೆನ್ಸಿಯಾ ಮಂಗಳೂರು ಇದರ ವತಿಯಿಂದ ಬ್ಯಾರಿ ಭಾಷಾ ದಿನಾಚರಣೆ ಕಾರ್ಯಕ್ರಮವು ಯೂ ಟ್ಯೂಬ್ ಚಾನೆಲ್ ಮೂಲಕ ಅ.3ರಂದು ಸಂಜೆ 4.30ಕ್ಕೆ ಪ್ರಸಾರವಾಗಲಿದೆ.

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿ ಗೌರವ ಪ್ರಶಸ್ತಿ ಪುರಸ್ಕೃತ ಲಯನ್ ಡಾ. ಇ.ಕೆ.ಎ.ಸಿದ್ದೀಕ್ ಅಡ್ಡೂರು ಕಾರ್ಯಕ್ರಮ ಉದ್ಘಾಟನೆ ಮಾಡಲಿದ್ದಾರೆ.

ಬ್ಯಾರಿ ವಾರ್ತೆ ಮಾಸಿಕದ ಸಂಪಾದಕ ಬಶೀರ್ ಬೈಕಂಪಾಡಿ, ತುಳುನಾಡ ರಕ್ಷಣಾ ವೇದಿಕೆಯ ಸ್ಥಾಪಕಾಧ್ಯಕ್ಷ ಯೋಗೀಶ್ ಶೆಟ್ಟಿ, ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ಓಸ್ವಾಲ್ಡ್ ಪುರ್ಟಾಡೊ, ದಿ ವಾಯ್ಸ್ ಆಫ್ ಬ್ಲಡ್ ಡೋನರ್ಸ್ ಮಂಗಳೂರು ಇದರ ಅಧ್ಯಕ್ಷರಾದ ರವೂಫ್ ಬಂದರ್, ಸುರತ್ಕಲ್ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಮುಹಮ್ಮದ್ ಸಮೀರ್, ಬ್ಯಾರಿ ಝುಲ್ಫಿ ಹಾಗು ಇತರರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ನಂತರ ಬಹುಭಾಷಾ ಕವಿ ಮುಹಮ್ಮದ್ ಬಡ್ಡೂರ್ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಕವಿಗೋಷ್ಠಿಯನ್ನು ಮೇಲ್ತೆನೆಯ ಗೌರವಾಧ್ಯಕ್ಷ ಆಲಿಕುಂಞಿ ಉದ್ಘಾಟಿಸಲಿದ್ದಾರೆ.

ಕವಿಗಳಾಗಿ ಹುಸೈನ್ ಕಾಟಿಪಳ್ಳ, ಝೈನುದ್ದೀನ್ ಕಾಟಿಪಳ್ಳ, ಹನೀಫ್ ಪರ್ಲಿಯಾ, ಎಂ.ಪಿ.ಬಶೀರ್ ಬಂಟ್ವಾಳ, ಸಮದ್ ಕಾಟಿಪಳ್ಳ, ರಿಯಾಝ್ ಅಶ್ರಫ್ ಭಾಗವಹಿಸಲಿದ್ದಾರೆ. ನಂತರ ಹನೀಫ್ ಪರ್ಲಿಯಾ, ಸಮದ್ ಕಾಟಿಪಳ್ಳ, ಸರ್ಪ್ರಝ್ ಆಲಂ, ಸುಹೈಲ್ ಬಡ್ಡೂರು, ಅಝರ್ ದಾಜಿನ್ ರವರಿಂದ ಬ್ಯಾರಿ ಗೀತೆಗಳ ಕಾರ್ಯಕ್ರಮ ನಡೆಯಲಿದೆ ಎಂದು ಸಂಯೋಜಕರಾದ ಫೈಝ್ ಕಾಟಿಪಳ್ಳ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News