ಸ್ಪರ್ಧಾತ್ಮಕ ಕಾಲಘಟ್ಟದ ಸವಾಲು ಸಮರ್ಥವಾಗಿ ಎದುರಿಸಿ ಮುನ್ನಡೆಯಿರಿ: ಮುಹಮ್ಮದ್ ಮೊಬಿನ್

Update: 2022-10-02 11:18 GMT

ಕೊಣಾಜೆ: ಇಂದಿನ  ಸ್ಪರ್ಧಾತ್ಮಕ ಕಾಲಘಟ್ಟದಲ್ಲಿ ಎದುರಾಗುವ ಸವಾಲುಗಳನ್ನು ಕಠಿಣ ಪರಿಶ್ರಮ, ಕೌಶಲದೊಂದಿಗೆ ಮುನ್ನಡೆದರೆ ಯಶಸ್ವಿ ಜೀವನವನ್ನು ಕಂಡುಕೊಳ್ಳಬಹುದು. ನಾವು ಜೀವನದಲ್ಲಿ ಗಳಿಸಿದ ಯಶಸ್ಸು ಗಳಿಸಿದ ನಂತರ ಬೆಳೆದು ಬಂದ ಹಾದಿಯನ್ನು  ಎಂದಿಗೂ ಮರೆಯದೆ ಮುನ್ನಡೆಯಬೇಕು ಎಂದು ಬೆಂಗಳೂರು ಸೈಬರ್ ಸೆಕ್ಯೂರಿಟಿ ನೊವಿಗೋ ಸೊಲ್ಯುಷನ್ ಇದರ ಉಪಾಧ್ಯಕ್ಷರಾದ ಮುಹಮ್ಮದ್ ಮೊಬಿನ್ ಅವರು ಹೇಳಿದರು.

ಅವರು ರವಿವಾರ ನಡೆದ ಪಿ.ಎ.ಕಾಲೇಜು ಸಭಾಂಗಣದಲ್ಲಿ ಭಾನುವಾರ ನಡೆದ ಪಿ.ಎ.ಇಂಜಿನಿಯರಿಂಗ್ ಕಾಲೇಜಿನ ಪದವಿ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.

ಪಿ.ಎ.ಸಿ.ಇ ಆಡಳಿತ ಟ್ರಸ್ಟಿ ಮಹಮ್ಮದ್ ಸಲ್ಮಾನ್ ಇಬ್ರಾಹಿಂ ಅವರು ಮಾತನಾಡಿ, ಅಧ್ಯಯನ ಎಂಬುದು ನಿರಂತರವಾದ ಪ್ರಕ್ರಿಯೆ. ಪದವಿಯೊಂದಿಗೆ ನಾವು ಬೆಳೆಸಿಕೊಳ್ಳುವ ಕೌಶಲ್ಯವು ಜೀವನದಲ್ಲಿ ಅಗತ್ಯ. ಅವಕಾಶಗಳು ಬಹಳಷ್ಟಿದ್ದರೂ ಅದನ್ನು ಸದುಪಯೋಗ ಪಡಿಸುವ ಚಾಕಚಕ್ಯತೆ ನಮ್ಮಲ್ಲಿರಬೇಕು ಎಂದರು.

ಪಿ.ಎ.ಮ್ಯಾನೇಜಿಂಗ್ ಟ್ರಸ್ಟಿ ಅಬ್ದುಲ್ಲಾ ಇಬ್ರಾಹಿಂ  ಅವರು ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ನಾವು ಯಾವುದೇ ಕ್ಷೇತ್ರದಲ್ಲಿ ಇದ್ದರೂ ನಮ್ಮಲ್ಲಿರುವ ಮಾನವೀಯ ಮೌಲ್ಯಗಳು ನಮ್ಮ ಶ್ರೇಷ್ಠತೆ ಕಾರಣ ಆಗುತ್ತದೆ.  ಕಷ್ಟಕಾಲದಲ್ಲಿ ಪರಸ್ಪರ ಹೇಗೆ ಸಹಾಯವಾಗಬೇಕು ಎನ್ನುವುದನ್ನು ಕೊರೋನ ಕಾಲಘಟ್ಟ. ನಮಗೆ ಕಲಿಸಿಕೊಟ್ಟಿದೆ. ಪದವಿಯೊಂದಿಗೆ ನಾವು ಬೆಳೆಸಿಕೊಳ್ಳುವ ಮಾನವೀಯತೆ ಮಹತ್ವದ್ದಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಟ್ರಸ್ಟಿ ಝುಬೈರ್ ಇಬ್ರಾಹಿಂ, ಪಿಎಸಿಟಿ ಎಜಿಎಂ ಸರ್ಫುದ್ದೀನ್, ಹಣಕಾಸು ವ್ಯವಸ್ಥಾಪಕ ಅಹಮ್ಮದ್ ಕುಟ್ಟಿ, ಸುಲ್ತಾನ್ ಇಬ್ರಾಹಿಂ,‌ ಪ್ರಾಂಶುಪಾಲರಾದ ಡಾ. ರಮೀಝ್ ಎಂ.ಕೆ.,ಉಪಪ್ರಾಶುಪಾಲೆ ಡಾ.ಶರ್ಮಿಳಾ ಕುಮಾರಿ,  ಡಾ.ಸಯ್ಯದ್ ಅಮೀನ್ ಅಹ್ಮದ್ ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಉಪಸ್ಥಿತರಿದ್ದರು.

ಸಂಯೋಜಕ ಪ್ರೊ.ಇಸ್ಮಾಯಿಲ್ ಶಾಫಿ ಸ್ವಾಗತಿಸಿದರು. ಉಪಪ್ರಾಂಶುಪಾಲೆ ಡಾ.ಶರ್ಮಿಳಾ ಕುಮಾರಿ ವಂದಿಸಿದರು. ಪ್ರೊ.ಫಾತಿಮತ್ ರೈಹಾನ ಹಾಗೂ ನಝೀಮ್ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News