×
Ad

ಗಾಂಧೀಜಿ ಹೆಜ್ಜೆಯಲ್ಲಿ ನಡೆಯುವುದೇ ಅವರಿಗೆ ಸಲ್ಲಿಸುವ ಗೌರವ : ಡಾ. ಶ್ರೀನಿವಾಸ ಕಕ್ಕಿಲಾಯ

Update: 2022-10-02 18:26 IST

ಮಂಗಳೂರು, ಅ. 2: ಗಾಂಧೀಜಿಯವರ ಆದರ್ಶಗಳಿಂದ ಪ್ರೇರಿತರಾಗಿ ಅವರ ಹೆಜ್ಜೆಯಲ್ಲಿ ನಡೆಯುವುದೇ ನಾವು ಅವರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಡಾ.ಶ್ರೀನಿವಾಸ ಕಕ್ಕಿಲ್ಲಾಯ ಅವರು ಹೇಳಿದರು.

ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ಆಶ್ರಯದಲ್ಲಿ ಟಾಗೋರ್ ಪಾರ್ಕ್‌ನಲ್ಲಿ ರವಿವಾರ ಜರಗಿದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣ ಮಾಡಿದರು.

ಪ್ರತಿಷ್ಠಾನದ ಅಧ್ಯಕ್ಷ ಎ.ಸದಾನಂದ ಶೆಟ್ಟಿ ಅವರು ಅಧ್ಯಕ್ಷತೆ ವಹಿಸಿದ್ದರು. ದುಡಿಯುವ ಮಕ್ಕಳ ಅಂತರಾಷ್ಟ್ರೀಯ ಸಂಸ್ಥೆ ‘ನಮ್ಮಭೂಮಿ’ಯ ರಾಯಭಾರಿ ಸಮಾಜ ಸೇವಕ ರಾಮಾಂಜಿ ಅವರಿಗೆ  ‘ಮಹಾತ್ಮ ಗಾಂಧಿ ಶಾಂತಿ ಪ್ರತಿಷ್ಠಾನದ ವರ್ಷದ ವ್ಯಕ್ತಿ 2022’ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಪ್ರಭಾಕರ ಶ್ರೀಯಾನ್, ಕೋಡಿಜಾಲ್ ಇಬ್ರಾಹಿಂ ಉಪಸ್ಥಿತರಿದ್ದರು. ಡಾ. ಎನ್. ಇಸ್ಮಾಯಿಲ್ ಸ್ವಾಗತಿಸಿದರು. ಕಲ್ಲೂರು ನಾಗೇಶ್ ನಿರೂಪಿಸಿದರು. ಶಮ ಸಮ್ಮಾನ ಪತ್ರ ವಾಚಿಸಿದರು. ರಾಮಕೃಷ್ಣ ಮಿಷನ್‌ನ ವಿದ್ಯಾರ್ಥಿಗಳು ಮತ್ತು ಬಲ್ಮಠ ಸರಕಾರಿ ಪ್ರಥಮ ದರ್ಜೆಯ ಕಾಲೇಜಿನ ವಿದ್ಯಾರ್ಥಿಗಳು ರಾಷ್ಟ್ರಪ್ರೇಮವನ್ನು ಬಿಂಬಿಸುವ ಕಾರ್ಯಕ್ರಮ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News