ಪಂಜಾಬ್: ವಿಶ್ವಾಸಮತ ಗೆದ್ದ ಮುಖ್ಯಮಂತ್ರಿ ಭಗವಂತ ಮಾನ್

Update: 2022-10-03 18:08 GMT
Photo: Twitter/BhagwantMann

ಹೊಸದಿಲ್ಲಿ, ಅ. 3: ಕಾಂಗ್ರೆಸ್ ಸದಸ್ಯರು ಸದನ ತ್ಯಜಿಸಿದ ಹೊರತಾಗಿಯೂ ಆಮ್ ಆದ್ಮಿ ಪಕ್ಷದ ಸರಕಾರ ಪಂಜಾಬ್ ವಿಧಾನ ಸಭೆಯಲ್ಲಿ ಸೋಮವಾರ  ವಿಶ್ವಾಸಮತ ಗೆದ್ದಿದೆ. 
ವಿಶ್ವಾಸಮತ ಯಾಚನೆಯ ಮೇಲಿನ ಚರ್ಚೆಯ ಬಳಿಕ ವಿಶ್ವಾಸಮತ ಯಾಚನೆಯಲ್ಲಿ ಆಮ್ ಆದ್ಮಿ ಪಕ್ಷ ಗೆಲುವು ಪಡೆಯಿತು. ಸ್ಪೀಕರ್ ಕುಲ್ತಾರ್ ಸಿಂಗ್ ಸಂಧ್ವಾನ್ ಅವರು ಸರಕಾರದ ಬೆಂಬಲಕ್ಕೆ ನಿಂತ ಶಾಸಕರಿಗೆ ಕೈ ಮೇಲೆತ್ತುವಂತೆ ಹೇಳಿದರು.  ಅನಂತರ ಬೆಂಬಲವನ್ನು ಎಣಿಕೆ ಮಾಡಿದ ಸ್ವೀಕರ್ ಸರಕಾರ ವಿಶ್ವಾಸ ಮತ ಗೆದ್ದಿದೆ ಎಂದು ತಿಳಿಸಿದರು. 
ಸದನದಲ್ಲಿ ಚರ್ಚೆ ಆರಂಭವಾಗುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಕಲಾಪ ತ್ಯಜಿಸಿದರು. ಶೂನ್ಯ ವೇಳೆಯಲ್ಲಿ ಮಾತನಾಡಲು ಹಾಗೂ ಕೆಲವು ವಿಷಯಗಳ ಬಗ್ಗೆ ಪ್ರಶ್ನೆ ಎತ್ತಲು ತಮಗೆ ಸಮಯ ನೀಡಬೇಕು ಎಂದು ಅವರು ಆಗ್ರಹಿಸಿದ್ದರು.  
117 ಸದಸ್ಯರ ಪಂಜಾಬ್ ವಿಧಾನ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ 91 ಶಾಸಕರು ಹಾಗೂ ಎಸ್‌ಎಡಿ, ಬಿಎಸ್‌ಪಿಯ ತಲಾ ಒಬ್ಬರು ಶಾಸಕರು ಸೇರಿದಂತೆ ಒಟ್ಟು 93 ಶಾಸಕರು ಸರಕಾರಕ್ಕೆ ಬೆಂಬಲ ವ್ಯಕ್ತಪಡಿಸಿದರು.  
117 ಸದಸ್ಯರ ಪಂಜಾಬ್ ವಿಧಾನ ಸಭೆಯಲ್ಲಿ ಆಪ್‌ನ 92 (ಸ್ಪೀಕರ್ ಸೇರಿದಂತೆ), ಕಾಂಗ್ರೆಸ್‌ನ 18, ಎಸ್‌ಎಡಿಯ 3, ಬಿಜೆಪಿಯ 2, ಬಿಎಸ್‌ಪಿಯ 1 ಹಾಗೂ ಪಕ್ಷೇತರ 1 ಶಾಸಕರು ಇದ್ದಾರೆ. ಪಂಜಾಬ್ ವಿಧಾನ ಸಭೆಯಲ್ಲಿ ಆಮ್ ಆದ್ಮಿ ಪಕ್ಷದ ಸರಕಾರ ವಿಶ್ವಾಸ ಮತ ಗೆದ್ದ ಬಳಿಕ ಮುಖ್ಯಮಂತ್ರಿ ಭಗವಂತ ಮಾನ್, ‘‘ಪಂಜಾಬ್‌ನಲ್ಲಿ ಆಪರೇಶನ್ ಕಮಲ ವಿಫಲವಾಯಿತು’’ ಎಂದು ಹೇಳಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News