ಕ್ಯಾನನ್ ಲಾ ಸೊಸೈಟಿ ಆಫ್ ಇಂಡಿಯಾದ ವಾರ್ಷಿಕ ಸಮ್ಮೇಳನ

Update: 2022-10-03 16:40 GMT

ಮಂಗಳೂರು : ಕ್ಯಾನನ್ ಲಾ ಸೊಸೈಟಿ ಆಫ್ ಇಂಡಿಯಾ (ಸಿಎಲ್‌ಎಸ್‌ಐ)ದ 35ನೇ ವಾರ್ಷಿಕ ಸಮ್ಮೇಳನವು ಮೊದಲ ಬಾರಿಗೆ ನಗರದ ಬಜ್ಜೋಡಿಯ ಪಾಸ್ಟೋರಲ್ ಇನ್‌ಸ್ಟಿಟ್ಯೂಟ್‌ನಲ್ಲಿ ಅತೀ ವಂ. ಬಿಷಪ್ ರೈ ರೆ. ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಅವರಿಂದ ಸೋಮವಾರ ಉದ್ಘಾಟಿಸಲ್ಪಟ್ಟಿತು.

ಸಮ್ಮೇಳನದಲ್ಲಿ ದೇಶದ ವಿವಿಧ ಭಾಗಗಳಿಂದ ಬಂದ 121 ಮಂದಿ ಪ್ರತಿನಿಧಿಗಳು ಭಾಗವಹಿಸಿದ್ದು, ಧರ್ಮಾಧ್ಯಕ್ಷರು ಸಮ್ಮೇಳನದ ಉದ್ದೇಶದ ಬಗ್ಗೆ ವಿವರಣೆ ನೀಡಿದರಲ್ಲದೆ ಈ ಸಮ್ಮೇಳನದಿಂದ ಕ್ರೈಸ್ತ ಸಭೆಯ ಪಾವಿತ್ರ್ಯತೆಯನ್ನು ಮತ್ತಷ್ಟು ಬಲಪಡಿಸಬೇಕಾಗಿದೆ ಎಂದರು.

ಮುಂಬೈಯ ಆರ್ಚ್ ಬಿಷಪ್ ಕಾರ್ಡಿನಲ್ ಓಸ್ವಾಲ್ಡ್ ಗ್ರೇಸಿಯಸ್ ಅವರು ಕೆಥೋಲಿಕ್ ಕ್ರೈಸ್ತ ಸಭೆಯಲ್ಲಿ ಸಿನೋಡಿಲಿಟಿ ಮತ್ತು ಸುಧಾರಣೆಗಳು ಎಂಬ ವಿಷಯದಲ್ಲಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕ್ಯಾನನ್ ಲಾ ಸೊಸೈಟಿ ಆಫ್ ಇಂಡಿಯಾದ ಸ್ಥಳೀಯ ಅಧ್ಯಕ್ಷ ವಂ.ಫಾ. ಜೋನ್ ಮೆಂಡೊನ್ಸಾ, ಮಂಗಳೂರು ಧರ್ಮಪ್ರಾಂತದ ಜುಡೀಶಿಯಲ್ ವಿಕಾರ್,  ಕಾರ್ಯಕ್ರಮದ ಸಂಘಟಕ  ವಂ. ಫಾ ವಾಲ್ಟರ್ ಡಿಮೆಲ್ಲೊ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News