ಉಚಿತ ಕೊಡುಗೆಗಳು ಟೈಂ-ಬಾಂಬ್ ಇದ್ದಂತೆ: ಎಸ್‌ಬಿಐ ವರದಿ; ಖರ್ಚುಗಳಿಗೆ ಕಡಿವಾಣ ಹಾಕಲು ಸುಪ್ರೀಂಗೆ ಆಗ್ರಹ

Update: 2022-10-03 17:53 GMT

ಹೊಸದಿಲ್ಲಿ,ಅ.3: ಉಚಿತ ಕೊಡುಗೆಗಳನ್ನು ನೀಡಲು ರಾಜ್ಯಗಳು ಪೈಪೋಟಿ ನಡೆಸುತ್ತಿದ್ದು,ಸರ್ವೋಚ್ಚ ನ್ಯಾಯಾಲಯದ ಸಮಿತಿಯು ಇಂತಹ ಕಲ್ಯಾಣ ಯೋಜನೆಗಳನ್ನು ರಾಜ್ಯಗಳ ಜಿಡಿಪಿಯ ಶೇ.1 ಅಥವಾ ಅವುಗಳ ಸ್ವಂತ ತೆರಿಗೆ ಸಂಗ್ರಹದ ಶೇ.1ಕ್ಕೆ ಸೀಮಿತಗೊಳಿಸಬಹುದಾಗಿದೆ ಎಂದು ಎಸ್‌ಬಿಐ ವರದಿ ಸೂಚಿಸಿದೆ.

ಎಸ್‌ಬಿಐಗೆ ಗ್ರೂಪ್ ಚೀಫ್ ಇಕನಾಮಿಕ್ ಅಡ್ವೈಸರ್ ಆಗಿರುವ ಸೌಮ್ಯಕಾಂತಿ ಘೋಷ್ ಅವರು ಸಿದ್ಧಪಡಿಸಿರುವ ವರದಿಯು ಮೂರು ರಾಜ್ಯಗಳನ್ನಷ್ಟೇ ಉದಾಹರಣೆಯಾಗಿ ನೀಡಿದೆ. ಬಡರಾಜ್ಯಗಳಾಗಿರುವ ಛತ್ತೀಸ್‌ಗಡ,ಜಾರ್ಖಂಡ್ ಮತ್ತು ರಾಜಸ್ಥಾನಗಳ ವಾರ್ಷಿಕ ಪಿಂಚಣಿ ಹೊಣೆಗಾರಿಕೆಗಳು ಮೂರು ಲ.ಕೋ.ರೂ.ಗಳೆಂದು ವರದಿಯು ಅಂದಾಜಿಸಿದೆ.

ಈ ರಾಜ್ಯಗಳ ಸ್ವಂತ ತೆರಿಗೆ ಸಂಗ್ರಹವನ್ನು ಗಮನಿಸಿದಾಗ ಪಿಂಚಣಿ ಹೊಣೆಗಾರಿಕೆಗಳು ಜಾರ್ಖಂಡ್,ರಾಜಸ್ಥಾನ ಮತ್ತು ಛತ್ತೀಸ್‌ಗಡಗಳಿಗೆ ಅನುಕ್ರಮವಾಗಿ ಶೇ.217,ಶೇ.190 ಮತ್ತು ಶೇ.207ರಷ್ಟು ಅಧಿಕ ಮಟ್ಟದಲ್ಲಿವೆ ಎನ್ನುವುದು ಕಂಡುಬಂದಿದೆ ಎಂದು ವರದಿಯು ಹೇಳಿದೆ.

ರಾಜ್ಯಗಳು ಬದಲಾವಣೆಗಾಗಿ ಚಿಂತನೆ ನಡೆಸುತ್ತಿರುವಾಗ ಇದು ಹಿಮಾಚಲ ಪ್ರದೇಶದಲ್ಲಿ ಸ್ವಂತ ತೆರಿಗೆ ಆದಾಯದ ಶೇ.450, ಗುಜರಾತಿನಲ್ಲಿ ಶೇ.138 ಮತ್ತು ಪಂಜಾಬಿನಲ್ಲಿ ಶೇ.242ರಷ್ಟು ಆಗುತ್ತದೆ ಎಂದು ವರದಿಯು ತಿಳಿಸಿದೆ. ಪಂಜಾಬ ಫಲಾನುಭವಿಗಳು ಏನನ್ನೂ ಪಾವತಿಸಬೇಕಿರದ ಹಳೆಯ ಪಿಂಚಣಿ ವ್ಯವಸ್ಥೆಗೆ ಮರಳಲು ಯೋಜಿಸುತ್ತಿದೆ ಎಂದೂ ವರದಿಯು ತಿಳಿಸಿದೆ.

ಇತ್ತೀಚಿನ ಲಭ್ಯ ಮಾಹಿತಿಗಳಂತೆ ರಾಜ್ಯಗಳ ಬಜೆಟೇತರ ಸಾಲಗಳು 2022ರಲ್ಲಿ ಜಿಡಿಪಿಯ ಸುಮಾರು ಶೇ.4.5ಕ್ಕೆ ತಲುಪಿವೆ ಎಂದು ಬೆಟ್ಟು ಮಾಡಿಇಂತಹ ಉಚಿತ ಕೊಡುಗೆಗಳು ಟೈ-ಬಾಂಬ್ ಇದ್ದಂತೆ ಎಂದು ಎಚ್ಚರಿಕೆ ನೀಡಿರುವ ವರದಿಯು,ಸರ್ವೋಚ್ಚ ನ್ಯಾಯಾಲಯದ ಸಮಿತಿಯು ಇಂತಹ ಕಲ್ಯಾಣ ಯೋಜನೆಗಳನ್ನು ರಾಜ್ಯಗಳ ಜಿಡಿಪಿಯ ಶೇ.1 ಅಥವಾ ಅವುಗಳ ಸ್ವಂತ ತೆರಿಗೆ ಸಂಗ್ರಹದ ಶೇ.1ಕ್ಕೆ ಸೀಮಿತಗೊಳಿಸಬೇಕು ಎಂದು ಸಲಹೆ ನೀಡಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News