ಉತ್ತರ ಕೊರಿಯಾದಿಂದ ಕ್ಷಿಪಣಿ: ನಿವಾಸಿಗಳನ್ನು ಸ್ಥಳಾಂತರಿಸುವಂತೆ ಜಪಾನ್‌ ಕರೆ

Update: 2022-10-04 04:13 GMT
ಸಾಂದರ್ಭಿಕ ಚಿತ್ರ (PTI)

ಟೋಕಿಯೊ: ಉತ್ತರ ಕೊರಿಯಾ(North Korea) ಅಪರಿಚಿತ ಬ್ಯಾಲಿಸ್ಟಿಕ್ ಕ್ಷಿಪಣಿಯನ್ನು(missile) ಹಾರಿಸಿದ ನಂತರ ಕೆಲವು ನಿವಾಸಿಗಳನ್ನು ಬೇರೆಯೇ ಆಶ್ರಯಕ್ಕೆ ಸ್ಥಳಾಂತರಿಸುವಂತೆ ಜಪಾನ್ (Japan) ಮಂಗಳವಾರ ಎಚ್ಚರಿಕೆ ನೀಡಿದೆ.

"ಉತ್ತರ ಕೊರಿಯಾವು ಕ್ಷಿಪಣಿಯನ್ನು ಉಡಾಯಿಸಿದಂತೆ ತೋರುತ್ತಿದೆ. ದಯವಿಟ್ಟು ನಿವಾಸಿಗಳನ್ನು ಕಟ್ಟಡಗಳು ಅಥವಾ ಭೂಗತ ಸ್ಥಳಕ್ಕೆ ಸ್ಥಳಾಂತರಿಸಿ" ಎಂದು ಸರ್ಕಾರವು ಬೆಳಿಗ್ಗೆ 7:29 ಕ್ಕೆ (2229 GMT ಸೋಮವಾರ) ಹೊರಡಿಸಿದ ಎಚ್ಚರಿಕೆಯಲ್ಲಿ ತಿಳಿಸಿದೆ. ದೇಶದ ಎರಡು ಉತ್ತರ ಭಾಗದ ಪ್ರದೇಶಗಳಿಗೆ ಎಚ್ಚರಿಕೆಯು ಜಾರಿಯಲ್ಲಿದೆ ಎಂದು ರಾಷ್ಟ್ರೀಯ ಮಾಧ್ಯಮ NHK ಹೇಳಿದೆ.

ಇದನ್ನೂ ಓದಿ: ಗದ್ದೆಯಲ್ಲಿ ಯುವತಿಯ ಮೃತದೇಹ ಪತ್ತೆ; ಅತ್ಯಾಚಾರ ಶಂಕೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News