ಬಂಟ್ವಾಳ | ಪಿಎಫ್ಐ ಬಗ್ಗೆ ಬರಹ ಪತ್ತೆ: ದೂರು

Update: 2022-10-04 07:05 GMT

ಬಂಟ್ವಾಳ, ಅ.4: ತಾಲೂಕಿನ ಪಿಲತಾಬೆಟ್ಟು ಗ್ರಾಮದ ಸ್ನೇಹಗಿರಿ ಎಂಬಲ್ಲಿನ ರಸ್ತೆಯಲ್ಲಿ ಯಾರೋ ಕಿಡಿಗೇಡಿಗಳು *"ಚಡ್ಡಿಗಳೆ ಎಚ್ಚರ‌. ಪಿ.ಎಫ್.ಐ. ನಾವು ಮರಳಿ ಬರುತ್ತೇವೆ"* ಎಂದು ಬರೆದಿದ್ದು ಈ ಬಗ್ಗೆ ಬಿಜೆಪಿ ಪುಂಜಾಲಕಟ್ಟೆ ಪೊಲೀಸ್ ಠಾಣೆಗೆ ದೂರು ನೀಡಿದೆ. 

ರಸ್ತೆಯ ಡಾಂಬರ್ ನಲ್ಲಿ ಸ್ಪ್ರೇ ಪೈಂಟ್ ನಲ್ಲಿ ಇದು ಬರೆಯಲಾಗಿದ್ದು, ಸೋಮವಾರ ರಾತ್ರಿ ಬರೆದಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ.

ಬರೆದ ಕಿಡಿಗೇಡಿಗಳನ್ನು ಕೂಡಲೇ ಬಂಧಿಸುವಂತೆ ಸ್ಥಳೀಯರು ಪೊಲೀಸರನ್ನು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ಬೆಳಗಾವಿ: ಎಸ್‌ಡಿಪಿಐ‌, ಪಿಎಫ್ಐ ಕಾರ್ಯಕರ್ತರಿಗೆ ಷರತ್ತುಬದ್ಧ ಜಾಮೀನು 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News