ʼಪ್ರಧಾನಿ ಕಾರ್ಯಕ್ರಮ ವರದಿ ಮಾಡಲು ಸನ್ನಡತೆ ಪ್ರಮಾಣಪತ್ರ ಕಡ್ಡಾಯʼ ಆದೇಶ ಹಿಂಪಡೆದ ಸ್ಥಳೀಯಾಡಳಿತ

Update: 2022-10-04 17:24 GMT

ಹೊಸದಿಲ್ಲಿ: ಹಿಮಾಚಲ ಪ್ರದೇಶಕ್ಕೆ ಬುಧವಾರ ಒಂದು ದಿನದ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿಯ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಸೆಕ್ಯುರಿಟಿ ಪಾಸ್‍ಗಳನ್ನು ಪಡೆಯಬೇಕಿದ್ದರೆ ಎಲ್ಲಾ ಪತ್ರಕರ್ತರಿಗೆ ಸನ್ನಡತೆಯ ಪ್ರಮಾಣಪತ್ರಗಳನ್ನು ಹಾಜರುಪಡಿಸಲು ಸ್ಥಳೀಯಾಡಳಿತ ನೀಡಿದ್ದ ಆದೇಶವನ್ನು ಹಿಂಪಡೆದುಕೊಳ್ಳಲಾಗಿದೆ. ಆಡಳಿತದ ಈ ಆದೇಶವು ದೇಶಾದ್ಯಂತ ಟೀಕೆಗೆ ಕಾರಣವಾದ ಬೆನ್ನಲ್ಲೇ ಆದೇಶವನ್ನು ಮರುಪಡೆಯಲಾಗಿದೆ ಎಂದು ವರದಿಯಾಗಿದೆ.

ಈ ಕುರಿತು ಬಿಲಾಸ್‌ಪುರದ ಪೊಲೀಸ್ ವರಿಷ್ಠಾಧಿಕಾರಿ ವಿಷಾದ ವ್ಯಕ್ತಪಡಿಸಿ ಹೊಸ ಅಧಿಸೂಚನೆಯನ್ನು ಹೊರಡಿಸಿದ್ದಾರೆ.

ಇದನ್ನೂ ಓದಿ: ಪ್ರಧಾನಿಯ ಹಿಮಾಚಲ ಪ್ರದೇಶ ಕಾರ್ಯಕ್ರಮಗಳ ವರದಿ ಮಾಡುವ ಪತ್ರಕರ್ತರಿಗೆ ಸನ್ನಡತೆ ಪ್ರಮಾಣಪತ್ರ ಕಡ್ಡಾಯ!

"ಈ ಕಛೇರಿಯಿಂದ ಅಜಾಗರೂಕತೆಯಿಂದ ಆದೇಶವನ್ನು ನೀಡಿದ್ದಕ್ಕಾಗಿ ವಿಷಾದವಿದೆ. ಆದೇಶವನ್ನು ಹಿಂತೆಗೆದುಕೊಳ್ಳಲಾಗಿದೆ, ಎಲ್ಲಾ ಮಾಧ್ಯಮಗಳಿಗೆ ಸ್ವಾಗತ ಮತ್ತು ಅವುಗಳ ಪ್ರಸಾರವನ್ನು ಸುಗಮಗೊಳಿಸಲಾಗುವುದು ಎಂದು ಅಧಿಸೂಚನೆಯು ಹೇಳಿದೆ.

ಸರ್ಕಾರದ ಮಾಧ್ಯಮ ವಿಭಾಗದಿಂದ ಶಿಫಾರಸು ಮಾಡಿದ ಎಲ್ಲರಿಗೂ ಪಾಸ್‌ಗಳನ್ನು ನೀಡಲಾಗುವುದು ಎಂದು ಹೊಸ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News