ಮಂಗಳೂರು ದಸರಾ ಮೆರವಣಿಗೆಗೆ ಮಾಜಿ ಸಚಿವ ಜನಾರ್ದನ ಪೂಜಾರಿ ಚಾಲನೆ
ಮಂಗಳೂರು, ಅ.5: ಮಂಗಳೂರು ದಸರಾ ಜನರ ಭಕ್ತಿ, ಉತ್ಸಾಹ, ದೇವರ ದಯೆಯಿಂದ ಈ ಹಿಂದಿನ ದಸರಾಕ್ಕಿಂತಲೂ ವಿಶಿಷ್ಟ ರೀತಿಯಲ್ಲಿ ನಡೆದಿದೆ. ಮೆರವಣಿಗೆಯೂ ಶ್ರೀ ಕ್ಷೇತ್ರದಿಂದ ಆರಂಭಗೊಂಡಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಮಾಜಿ ವಿತ್ತ ಸಚಿವ ಬಿ.ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ಕೊರೋನ ಕಾರಣದಿಂದ ಈ ಹಿಂದಿನ ವರ್ಷ ವಿಜೃಂಭಣೆಯಿಂದ ಆಚರಿಸಲು ಸಾಧ್ಯವಾಗಿಲ್ಲ. ಆದರೆ ಈ ಬಾರಿಯೂ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಿದ್ದಾರೆ ಎಂದು ಜನಾರ್ದನ ಪೂಜಾರಿ ತಿಳಿಸಿದ್ದಾರೆ.
ನೂರಾರು ಬಣ್ಣದ ಕೊಡೆಗಳನ್ನು ಹಿಡಿದ ಸ್ವಯಂ ಸೇವರು,ಆಕರ್ಷಕ ಹುಲಿ ವೇಶದ ತಂಡಗಳ ನೃತ್ಯ, ವಿವಿಧ ಟ್ಯಾಬ್ಲೋ ಮಂಗಳೂರು ದಸರಾ ಮೆರವಣಿಗೆಗೆ ಮೆರುಗು ನೀಡಿದದೆ.
*ಹಿರಿಯ ಮುಖಂಡರಾದ ಜನಾರ್ದನ ಪೂಜಾರಿಯವರ ಮಾರ್ಗದ ರ್ಶನ ದಲ್ಲಿ ಈ ಬಾರಿ ಮಂಗಳೂರು ದಸರಾ ವಿಜೃಂಭಣೆಯಿಂದ ನಡೆದಿದೆ. ಪ್ರತಿದಿನ ಅನ್ನದಾನ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮ ಗಳು ನಡೆಸಿದ ದಿದೆ. 12ಲಕ್ಷ ರೂ ವೆಚ್ಚದಲ್ಲಿ ನಿರ್ಮಾಣ ಗೊಂಡ ರಜತ ಪೀಠ ಕ್ಷೇತ್ರದ ಭಕ್ತರ ವತಿಯಿಂದ ದೇವಿ ಶಾರದೆಗೆ ಅರ್ಪಿಸಲಾಗಿದೆ. ಭಕ್ತರ ಒಂದು ಕುಟುಂಬದ ವತಿಯಿಂದ ಶಾರದಾ ದೇವಿಗೆ ರಜತ ವೀಣೆ ಸಮರ್ಪಣೆ ಮಾಡಲಾಗಿದೆ. ದಸರಾ ಉತ್ಸವದ ವಿಜಯದಶಮಿಯ ದಿನದಂದು ಮಂಗಳೂರು ವರ್ಣ ರಂಜಿತ ದಸರಾ ಮೆರವಣಿಗೆ ಕುದ್ರೋಳಿ ಕ್ಷೇತ್ರದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರುಗಳ ಪ್ರತಿಮೆ, ಗಣೇಶ ಪ್ರತಿಮೆ, ನವದುರ್ಗೆಯರ ಪ್ರತಿಮೆಯೊಂದಿಗೆ ಶಾರದಾ ದೇವಿಯ ಪ್ರತಿಮೆಯ ಮೆರವಣಿಗೆಯನ್ನು ಈ ಬಾರಿ ಆರಂಭದಲ್ಲಿ ಹೊರಡಿಸಲಾಗಿದೆ. ದೇಶ ವಿದೇಶದಿಂದ ಭಕ್ತರ ವಿವಿಧ ಮಾಧ್ಯಮಗಳ ಮೂಲಕ ಮಂಗಳೂ ರು ದಸರಾ ವೀಕ್ಷಿಸುತ್ತಿದ್ದಾರೆ ಎಂದು ಉತ್ಸವ ಸಮಿತಿಯ ಕೋಶಾಧಿಕಾರಿ ಪದ್ಮರಾಜ್ ತಿಳಿಸಿದ್ದಾರೆ.
ಈ ಬಾರಿ ಮಂಗಳೂರು ಮಹಾನಗರ ಪಾಲಿಕೆ ಯ ವತಿಯಿಂದ ವಿದ್ಯುತ್ ದೀಪಗಳಿಂದ ನಗರದಲ್ಲಿ ಅಲಂಕಾರ ಮಾಡಿರುವುದಕ್ಕೆ ಶ್ರೀ ಕುದ್ರೋಳಿ ಗೋಕರ್ಣ ಕ್ಷೇತ್ರದ ಕ್ಷೇತ್ರಾಡಳಿತ ಮಂಡಳಿಯ ಅಧ್ಯಕ್ಷ ಎಚ್. ಎಸ್. ಸಾಯಿರಾಮ್ ಕೃತಜ್ಞತೆ ಸಲ್ಲಿಸಿದರು. ಮನಪಾ ಮೇಯರ್ ಜಯಾನಂದ ಅಂಚನ್ ,ಕಾರ್ಯ ದರ್ಶಿ ಬಿ.ಮಾಧವ ಸುವರ್ಣ, ಕ್ಷೇತ್ರಾಡಳಿತ ಮಂಡಳಿಯ ಕೋಶಾ ಧಿಕಾರಿ ಪದ್ಮರಾಜ್ ಉಪಾಧ್ಯಕ್ಷೆ ಊರ್ಮಿಳಾ ರಮೇಶ್, ಮಂಡಳಿಯ ಪದಾಧಿಕಾರಿಗಳಾದ ರವಿಶಂಕರ್ ಮಿಜಾರ್, ಕೆ.ಮಹೇಶ್ಚಂದ್ರ, ಎಂ.ಶೇಖರ ಪೂಜಾರಿ, ಹರಿಕೃಷ್ಣ ಬಂಟ್ವಾಳ, ದೇವೇಂದ್ರ ಪೂಜಾರಿ, ಬಿ.ಜಿ.ಸುವರ್ಣ, ಬಿಲ್ಲವ ಮಹಾ ಮಂಡಲದ ಅಧ್ಯಕ್ಷ ರಾಜಶೇಖರ ಕೊಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.