×
Ad

ಉಜಿರೆ: ಮಲ್‌ಜ‌ಅ್‌ ವತಿಯಿಂದ ಮೀಲಾದ್ ಕಾನ್ಫರೆನ್ಸ್

Update: 2022-10-05 20:58 IST

ಬೆಳ್ತಂಗಡಿ: ಮಲ್‌ಜ‌ಅ್‌ ನೇತೃತ್ವದಲ್ಲಿ 'ಇಶ್ಕೇ ರಸೂಲ್ ಮೀಲಾದ್ ಕಾನ್ಫರೆನ್ಸ್‌, ಹೈವೇ ಮಾರ್ಚ್' ಮತ್ತು ಮಾಸಿಕ ದಿಕ್ರ್ ಸ್ವಲಾತ್ ಕಾರ್ಯಕ್ರಮ ನಡೆಯಿತು.

ಆರಂಭದಲ್ಲಿ 'ಇಶ್ಕೇ ರಸೂಲ್ ಹೈವೇ ಮಾರ್ಚ್' ಉಜಿರೆ ಪೇಟೆಯಲ್ಲಿ ಸಾಗಿ ಬಂತು. ಸುನ್ನೀ ಸಂಯುಕ್ತ ಜಮಾಅತ್ ಅಧ್ಯಕ್ಷ ಸಯ್ಯಿದ್ ಇಸ್ಮಾಯಿಲ್ ತಂಙಳ್ ಅವರು ಸಯ್ಯಿದ್ ಉಜಿರೆ ತಂಙಳ್ ರಿಗೆ ಧ್ವಜ ಹಸ್ತಾಂತರಿಸುವ ಮೂಲಕ ಜಾಥಾಕ್ಕೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಉಜಿರೆ ದರ್ಗಾದಲ್ಲಿ ಪ್ರಾರ್ಥನೆ ನಡೆಯಿತು. ಜಾಥಾದಲ್ಲಿ ಅತ್ಯಾಕರ್ಷಕ ಸ್ಕೌಟ್ ಮತ್ತು ಸಾಂಪ್ರದಾಯಿಕ ದಫ್ ಪ್ರದರ್ಶನ ನಡೆಯಿತು.

'ಮಲ್‌ಜ‌ಅ ಕ್ಯಾಂಪಸ್‌'ನ ವೇದಿಕೆಯಲ್ಲಿ ಖ್ಯಾತ ವಾಗ್ಮಿ ನೌಫಲ್ ಸಖಾಫಿ ಕಳಸ "ಹುಬ್ಬುರಸೂಲ್" ಪ್ರಭಾಷಣ ನಡೆಸಿದರು. ಮಗ್ರಿಬ್ ಬಳಿಕ ಸಯ್ಯಿದ್ ಉಜಿರೆ ತಂಙಳ್ ನೇತೃತ್ವದಲ್ಲಿ ಮಾಸಿಕ್ ಧಿಕ್ರ್ ಸ್ವಲಾತ್ ಮಜ್ಲಿಸ್ ಹಾಗೂ ಮೀಲಾದ್ ಪ್ರಾರ್ಥನಾ ಸಂಗಮ ನಡೆಯಿತು.‌ ಹಾಡುಗಾರ ಹಾಫಿಲ್ ಅನ್ವರ್ ಅಲೀ ಸಖಾಫಿ ಮತ್ತು ಸಂಗಡಿಗರಿಂದ ಇಶ್ಕೇ ರಸೂಲ್ ಬುರ್ದಾ ಆಲಾಪಣೆ, ನ‌ಅತ್ ಶರೀಫ್ ಗಾಯನ ನಡೆಯಿತು.

ಮಲ್‌ಜ‌ಅ ದ‌ಅವಾ ಕಾಲೇಜು ಮುದರ್ರಿಸ್ ಹರ್ಷದ್ ಸಖಾಫಿ ಸ್ವಾಗತಿಸಿದರು. ದರ್ಸ್ ಮುದರ್ರಿಸ್ ಆಸಿಫ್ ಅಹ್ಸನಿ ಉದ್ಘಾಟನೆ ನೆರವೇರಿಸಿದರು.

ಜಾಥಾದಲ್ಲಿ ಮತ್ತು ಸಮಾರಂಭದಲ್ಲಿ ಸಯ್ಯಿದ್ ಎಸ್.ಎಂ ತಂಙಳ್, ಸಯ್ಯಿದ್ ಸವಾದ್ ಇಸ್ಮಾಯಿಲ್ ತಂಙಳ್, ಹೈದರ್ ಮದನಿ, ಇಬ್ರಾಹಿಂ ಸಖಾಫಿ‌ ಕಬಕ, ಅಶ್ರಫ್ ಆಲಿಕುಂಞಿ, ಸುಲೈಮಾನ್ ಕುಂಟಿನಿ, ಹಾಫಿಲ್ ಹನೀಫ್ ಮಿಸ್ಬಾಹಿ, ಅಬೂಬಕ್ಕರ್ ಮುಗುಳಿ, ಇಕ್ಬಾಲ್ ಮಾಚಾರು, ಮುಹಮ್ಮದ್ ಶರ್ವಾನಿ ನೆರಿಯ, ಅಶ್ರಫ್ ಎಂ.ಹೆಚ್, ಎಂ.ಎ ಕಾಸಿಂ ಮುಸ್ಲಿಯಾರ್ ಮಾಚಾರ್, ಇಬ್ರಾಹಿಂ ಕಕ್ಕಿಂಜೆ, ರಫೀಕ್ ಮದನಿ ಕಕ್ಕಿಂಜೆ,  ಮುಹಮ್ಮದ್ ರಫಿ, ರಝಾಕ್ ಅಟೋ, ಮುಸ್ತಫಾ, ದಾವೂದ್ ಉಜಿರೆ, ರಝಾಕ್ ಸಖಾಫಿ ಮಡಂತ್ಯಾರು, ಎಸ್.ಎ ಖಾದರ್, ಹಾರಿಸ್ ಉಜಿರೆ, ಆಸಿಫ್,  ಮೊದಲಾದವರು ಭಾಗಿಯಾಗಿದ್ದರು.

ಸಂಸ್ಥೆಯ ಜನರಲ್ ಮೆನೇಜರ್ ಮೆಹಬೂಬುರ್ರಹ್ಮಾನ್ ಸಖಾಫಿ ಕಾರ್ಯಕ್ರಮ ಸಂಯೋಜಿಸಿದರು.‌ ಸಾರ್ವಜನಿಕ ಸಂಪರ್ಕಾಧಿಕಾರಿ ಶರೀಫ್ ಬೆರ್ಕಳ ವಂದಿಸಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News