ಯೆನೆಪೊಯ : ರಕ್ತದಾನ ಮಾಹಿತಿ ಕಾರ್ಯಕ್ರಮ

Update: 2022-10-06 11:41 GMT

ಕೊಣಾಜೆ : ರಾಷ್ಟ್ರೀಯ ರಕ್ತದಾನಿಗಳ ದಿನದ ಅಂಗವಾಗಿ ಯೆನೆಪೊಯ ವಿಶ್ವವಿದ್ಯಾನಿಲಯದ ಯುವ ರೆಡ್ ಕ್ರಾಸ್ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕವು ರಕ್ತನಿಧಿ ಕೇಂದ್ರ ಯೆನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಹಯೋಗದೊಂದಿಗೆ ರಕ್ತದಾನ ಮಾಹಿತಿ ಕಾರ್ಯಕ್ರಮ ಹಾಗೂ ವಿದ್ಯಾರ್ಥಿ ಸ್ವಯಂಸೇವಕರಿಗೆ  ಈ-ಪೋಸ್ಟರ್ ಸ್ಪರ್ಧೆಯು ಇತ್ತೀಚೆಗೆ ಯೆನೆಪೊಯ ನ್ಯಾಚುರೋಪತಿ ಕಾಲೇಜಿನಲ್ಲಿ ನಡೆಯಿತು.

ನೋಡಲ್ ಅಧಿಕಾರಿ ನಿತ್ಯಶ್ರೀ ಮಾತನಾಡಿ ರೆಡ್ ಕ್ರಾಸ್‍ನ ಮೂಲಚಟುವಟಿಕೆಗಳಲ್ಲಿ ರಕ್ತದಾನವೂ ಒಂದಾಗಿದೆ. ಈ ಶ್ರೇಷ್ಠ ಕಾರ್ಯದಲ್ಲಿ ವಿದ್ಯಾರ್ಥಿ ಸ್ವಯಂ ಸೇವಕರು ಸ್ವ ಇಚ್ಚೆಯಿಂದ ಪಾಲ್ಗೊಳ್ಳುವ ಮೂಲಕ ಈ ಮಹತ್ಕಾರ್ಯ ದಲ್ಲಿ ಕೈಗೂಡಿಸಬೇಕಾಗಿ ಹೇಳಿದರು. ಸಂಪನ್ಮೂಲ ವ್ಯಕ್ತಿ ಡಾ. ಇಂದಿರಾ ಎಸ್ ಪುತ್ರನ್ ರಕ್ತದಾನದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.

ರಕ್ತನಿಧಿ ಕೇಂದ್ರದಲ್ಲಿ 40ಕ್ಕೂ ಹೆಚ್ಚು ಸ್ವಯಂ ಸೇವಕರು ರಕ್ತದಾನಕ್ಕೆ ಹೆಸರನ್ನು ನೋಂದಾಯಿಸಿ 20ಕ್ಕೂ ಹೆಚ್ಚು ಯುನಿಟ್ ರಕ್ತ ಸ್ವೀಕರಿಸಲಾಯಿತು. ಕಾರ್ಯಕ್ರಮದಲ್ಲಿ ಯೆನೆಪೊಯ ವಿವಿಯ ಡಾ. ಇಂದಿರಾ, ಡಾ. ಸಯ್ಯದ್,  ಡಾ.ತಾರಿಕ್, ಜ್ಯೋತಿ ಉಪಸ್ಥಿತರಿದ್ದರು.

ಡಾ. ಅಜಿತ್ ಸ್ವಾಗತಿಸಿ, ಡಾ. ಶ್ರೇಯಾ ವಂದಿಸಿದರು. ಡಾ. ಹರಿನಾರಾಯಣ, ಡಾ. ಅರುಣ್ ದೀಪ್, ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿಗಳು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News