ದೇರಳಕಟ್ಟೆ: ಮೇಲ್ತೆನೆ ಸ್ವಾಗತ ಸಮಿತಿಯ ಸಭೆ
ದೇರಳಕಟ್ಟೆ, ಅ.7: ಮೇಲ್ತೆನೆಯ ವತಿಯಿಂದ ಅಕ್ಟೋಬರ್ 15ರಂದು ಕಣಚೂರು ಪಬ್ಲಿಕ್ ಸ್ಕೂಲ್‌ನಲ್ಲಿ ನಡೆಯುವ ಉಳ್ಳಾಲ ತಾಲೂಕು ಬ್ಯಾರಿ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಸಭೆಯು ಗುರುವಾರ ದೇರಳಕಟ್ಟೆ ಜಂಕ್ಷನ್‌ನಲ್ಲಿರುವ ಆನೆಕಲ್ ಟವರ್‌ನಲ್ಲಿ ನಡೆಯಿತು.
ಸ್ವಾಗತ ಸಮಿತಿಯ ಅಧ್ಯಕ್ಷ ನಝೀರ್ ಉಳ್ಳಾಲ್ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸಮ್ಮೇಳನದ ಯಶಸ್ವಿಗೆ ವಿವಿಧ ಉಪಸಮಿತಿಗಳ ಸಂಚಾಲಕರು, ಉಪ ಸಂಚಾಲಕರು, ಸರ್ವ ಸದಸ್ಯರು ಅವಿರತವಾಗಿ ಶ್ರಮಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಸ್ವಾಗತ ಸಮಿತಿಯ ಮುಖಂಡರಾದ ಆಲಿಕುಂಞಿ ಪಾರೆ, ಯುಕೆ ಖಾಲಿದ್, ಸಿದ್ದೀಕ್ ತಲಪಾಡಿ, ನಝರ್ ಷಾ ಪಟ್ಟೋರಿ, ಅಬ್ಬಾಸ್ ಉಚ್ಚಿಲ್, ಅಬ್ದುಲ್ ರಝಾಕ್ ಶಾಲಿಮಾರ್, ಮೂಸಾ ಅಬ್ಬಾಸ್ ಕುರಿಯಕ್ಕಾರ್, ಮುಹಮ್ಮದ್ ಹನೀಫ್ ಶೈನ್ ಹಾರ್ಡ್‌ವೇರ್, ಹೈದರ್ ಕೈರಂಗಳ, ಇಬ್ರಾಹಿಂ ಕುಂಞಿ ಪಾರೆ, ಇಬ್ರಾಹಿಂ ನಡುಪದವು, ಇಬ್ರಾಹಿಂ ಕೊಣಾಜೆ, ಯುಪಿ ಸುಲೈಮಾನ್ ಸಹಾರಾ, ಹಂಝ ಮಲಾರ್, ಮನ್ಸೂರ್ ಅಹ್ಮದ್ ಸಾಮಣಿಗೆ, ಅಶೀರುದ್ದೀನ್ ಸಾರ್ಥಬೈಲ್, ಬಶೀರ್ ಮೊಂಟೆಪದವು, ಶಬ್ಬೀರ್ ತಲಪಾಡಿ, ಅಬೂಬಕರ್ ಸಿದ್ದೀಕ್, ಅಬ್ದುಲ್ ಲತೀಫ್ ಸಾಮಣಿಗೆ, ಖಲಂದರ್ ಶಾಫಿ ಅಸೈಗೋಳಿ ಮತ್ತಿತರರು ಉಪಸ್ಥಿತರಿದ್ದರು.
ಪ್ರಚಾರ ಸಮಿತಿಯ ಸಂಚಾಲಕ ಮಂಗಳೂರ ರಿಯಾಝ್ ಸ್ವಾಗತಿಸಿದರು. ಉಪ ಸಂಚಾಲಕ ಸೋಶಿಯಲ್ ಫಾರೂಕ್ ವಂದಿಸಿದರು.