ಜಪ್ಪಿನಮೊಗರು ವಾರ್ಡ್‌ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಚಾಲನೆ

Update: 2022-10-07 11:22 GMT

ಮಂಗಳೂರು: ಮಹಾನಗರ ಪಾಲಿಕೆಯ ಜಪ್ಪಿನಮೊಗರು ವಾರ್ಡ್‌ ವ್ಯಾಪ್ತಿಯ ವಾಸುಕಿ ನಗರದಲ್ಲಿ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಶಾಸಕ ಕಾಮತ್, ವಾಸುಕಿ ನಗರದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ವೇದಿಕೆ ನಿರ್ಮಿಸುವ ಕುರಿತು ಸಾರ್ವಜನಿಕರ ಬೇಡಿಕೆ ಬಂದಿತ್ತು. ಆ ಪ್ರಕಾರವಾಗಿ ಪಾಲಿಕೆ ಸಂಬಂಧಪಟ್ಟ ಜಾಗದಲ್ಲಿ ವೇದಿಕೆ ಹಾಗೂ ಗ್ರೀನ್ ರೂಮ್ ನಿರ್ಮಾಣಕ್ಕೆ 20 ಲಕ್ಷ ರೂಪಾಯಿ ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದು ಹೇಳಿದರು.

ಜಪ್ಪಿನಮೊಗರು ವಾರ್ಡಿನಲ್ಲಿ ಕಳೆದ 4 ವರ್ಷಗಳಿಂದ ಸಮರೋಪಾದಿಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಮಳೆಗಾಲದ ಸಂದರ್ಭದಲ್ಲಿ ಕೃತಕ ನೆರೆ ಉಂಟಾಗುವ‌ ರಾಜಕಾಲುವೆಗಳನ್ನು ಅಭಿವೃದ್ಧಿಪಡಿಸಿದ ಕಾರಣ ಬಹು ವರ್ಷಗಳ ನಂತರ ಈ ವಾರ್ಡಿನಲ್ಲಿ ನೆರೆ ಹಾವಳಿಯ ಸಮಸ್ಯೆ ಅಷ್ಟಾಗಿ ಬಾಧಿಸಿಲ್ಲ‌. ರಸ್ತೆ ನಿರ್ಮಾಣ, ಚರಂಡಿ, ತಡೆಗೋಡೆ ನಿರ್ಮಾಣ, ದೇವಸ್ಥಾನಗಳ ಅಭಿವೃದ್ಧಿ ಸೇರಿದಂತೆ ಜನಪರ ಯೋಜನೆಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ‌ಮೇಯರ್ ಜಯಾನಂದ ಅಂಚನ್, ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಕಿಶೋರ್ ಕೊಟ್ಟಾರಿ, ನಯನ ಆರ್. ಕೋಟ್ಯಾನ್, ಸ್ಥಳೀಯ ಕಾರ್ಪೋರೇಟರ್ ವೀಣಾ ಮಂಗಳ, ಪಾಲಿಕೆ ಸದಸ್ಯರಾದ ಪ್ರವಿಣ್ ಚಂದ್ರ ಆಳ್ವ, ಪಾಲಿಕೆ ನಾಮನಿರ್ದೇಶಿತ ಸದಸ್ಯರಾದ ಭಾಸ್ಕರ್ ಚಂದ್ರ‌ ಶೆಟ್ಟಿ, ಮುಖಂಡರಾದ ಕಿರಣ್ ರೈ ಬಜಾಲ್, ಸುರೇಂದ್ರ ಜಪ್ಪಿನಮೊಗರು, ಭರತ್ ರಾಜ್ ಶೆಟ್ಟಿ, ಸುಕೇಶ್ ಬಜಾಲ್, ಎಂ.ಪಿ ಗಣೇಶ್, ರವೀಂದ್ರ ರಾವ್, ಎಸ್ ಕುಮಾರ್, ಪಿ.ಎ ಶ್ರೀನಿವಾಸ್, ರಮೇಶ್ ಸಹ್ಯಾದ್ರಿ, ರಾಮು, ಸಂದೇಶ್ ಶೆಟ್ಟಿ, ರಾಮ್ ಪ್ರಸಾದ್ ಶೆಟ್ಟಿ, ಉದಯ್, ವಿನ್ಸೆಂಟ್ ಡಿಸೋಜ, ಸುನಿತಾ, ಸುಜಾತ, ಪ್ರೀತಿ, ವಿದ್ಯಾ, ವಿನೋದ್ ರಾವ್, ವಿದ್ಯಾ ರಾವ್, ವಿಜಯ್, ಪ್ರವೀಣ್ ಕುಮಾರ್, ರಾಘವೇಂದ್ರ, ಸ್ನೇಹ, ಜಯಶ್ರೀ, ಸುಮತಿ, ಈಶ್ವರ್, ನಾಗೇಂದ್ರ, ಸುಪ್ರಿಯಾ, ರಾಮಚಂದ್ರ ಆಳ್ವ, ಜಯಪ್ರಕಾಶ್, ಪ್ರವೀಣ್ ನಿಡ್ಡೇಲ್, ಭಾರ್ಗವ‌ ಬಲ್ಯಾಯ, ಚಂದ್ರಶೇಖರಯ್ಯ, ರಾಘವೇಂದ್ರ ‌ಶೆಟ್ಟಿ, ಸ್ಥಳೀಯರು ಹಾಗೂ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News