ಇಂದ್ರಾಳಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ: ಟ್ರಾಫಿಕ್ ಜಾಮ್‌ ನಲ್ಲಿ ಬಸವಳಿದ ಜನತೆ

Update: 2022-10-07 12:06 GMT

ಉಡುಪಿ, ಅ. 7: ವಾಹನ ಸವಾರರಿಗೆ ತೀವ್ರ ಸಮಸ್ಯೆಯಾಗಿ ಪರಿಣಮಿಸಿದ್ದ ಇಂದ್ರಾಳಿ ಸೇತುವೆ ರಸ್ತೆ (ರಾ. ಹೆ. 169 ಎ) ಕಾಮಗಾರಿ ಮೊನ್ನೆ ಯಿಂದ ಭರದಿಂದ ಸಾಗಿದೆ. ಒಂದು ಬದಿಯಲ್ಲಿ ಕಾಮಗಾರಿ ನಡೆಯುತ್ತಿರುವುದ ರಿಂದ ಇನ್ನೊಂದು ಬದಿಯಲ್ಲಿ ಮಾತ್ರ ವಾಹನಗಳ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.

ಇದರಿಂದಾಗಿ ಇಂದ್ರಾಳಿ ಸೇತುವೆ ಸಮೀಪ ದೊಡ್ಡ ಪ್ರಮಾಣದಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ. ಸಂಜೆ ಮತ್ತು ಬೆಳಗ್ಗಿನ ಪೀಕ್ ಅವರ್ ನಲ್ಲಿ ಇಂದ್ರಾಳಿಯಿಂದ ಎಂಜಿಎಂವರೆಗೂ ವಾಹನಗಳು ಬಹು ಹೊತ್ತು ನಿಂತು ನಿಂತು ಮುಂದಕ್ಕೆ ಹೋಗಬೇಕಾಗುತ್ತದೆ. ಇನ್ನೊಂದು ಕಡೆಯಲ್ಲಿ ಇಂದ್ರಾಳಿ ಬಸ್‌ ನಿಲ್ದಾಣವರೆಗೂ ಸಂಚಾರ ದಟ್ಟಣೆಯಿಂದ ಕೂಡಿರುತ್ತದೆ.

ಈ ರಸ್ತೆಯಲ್ಲಿ ಈಗಾಗಲೇ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದ್ದು, ಲಘು ವಾಹನ ಸವಾರರು ರಸ್ತೆ ಕಾಮಗಾರಿ ಪೂರ್ಣಗೊಳ್ಳುವ ತನಕ ಟ್ರಾಫಿಕ್ ಕಿರಿಕಿರಿ ಎದುರಿಸಬೇಕಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News