ಗೊತಬಯ ವಿರುದ್ಧ ಕಾನೂನು ಪ್ರಕ್ರಿಯೆಗೆ ಅನುಮತಿ

Update: 2022-10-07 17:19 GMT

ಕೊಲಂಬೊ, ಅ.7: ಶ್ರೀಲಂಕಾದ  ಮಾಜಿ ಅಧ್ಯಕ್ಷ ಗೊತಬಯ ರಾಜಪಕ್ಸ ವಿರುದ್ಧ ಕಾನೂನು ಪ್ರಕ್ರಿಯೆ ಆರಂಭಿಸಲು ಅಲ್ಲಿನ ಸರ್ವೋಚ್ಛ ನ್ಯಾಯಾಲಯವು ಅನುಮತಿ ನೀಡಿದೆ ಎಂದು ಗೊತಬಯ ವಿರುದ್ಧ ದೂರು ನೀಡಿರುವ ಮಾನವ ಹಕ್ಕುಗಳ ಹೋರಾಟ ಸಂಸ್ಥೆ ಶುಕ್ರವಾರ ಹೇಳಿದೆ.

ಜತೆಗೆ, ಮಾಜಿ ಪ್ರಧಾನಿ ಮಹಿಂದಾ ರಾಜಪಕ್ಸ, ಮಾಜಿ ವಿತ್ತಸಚಿವ, ಮತ್ತು ಸೆಂಟ್ರಲ್ ಬ್ಯಾಂಕ್ನ ಇಬ್ಬರು ಗವರ್ನರ್ ವಿರುದ್ಧವೂ ಕಾನೂನು ಪ್ರಕ್ರಿಯೆ ಆರಂಭಿಸಲು  ಸರ್ವೋಚ್ಛ ನ್ಯಾಯಾಲಯವು ಸೂಚಿಸಿದೆ. ಸುಮಾರು 7 ದಶಕಗಳಲ್ಲೇ ಕಂಡು ಕೇಳರಿಯದ ಆರ್ಥಿಕ ಸಂಕಷ್ಟ ಎದುರಾಗಲು ದ್ವೀಪರಾಷ್ಟ್ರದ ನಾಯಕತ್ವ ಕಾರಣವಾಗಿದ್ದು, ಈ ಬಿಕ್ಕಟ್ಟಿಗೆ ಅವರನ್ನು ಹೊಣೆಯಾಗಿಸಬೇಕು ಎಂದು ಆಗ್ರಹಿಸಿ  ` ಟ್ರಾನ್ಸ್ಪರೆನ್ಸಿ ಇಂಟರ್ನ್ಯಾಷನಲ್' ಎಂಬ ಮಾನವ ಹಕ್ಕು ಹೋರಾಟ ಸಂಘಟನೆ  ಗೊತಬಯ ರಾಜಪಕ್ಸ , ಮಹಿಂದಾ ಮತ್ತಿತರರ ವಿರುದ್ಧ ದೂರು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News