ಚೋಳರ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ: ಕಮಲ್ ಹಾಸನ್

Update: 2022-10-07 18:08 GMT

ಚೋಳರ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ: ಕಮಲ್ ಹಾಸನ್ 

ಚೆನ್ನೈ, ಅ. 6:  ರಾಜ ರಾಜ ಚೋಳ ಹಿಂದೂ ರಾಜನಾಗಿರಲಿಲ್ಲ ಎಂಬ ತಮಿಳು ಚಿತ್ರ ನಿರ್ದೇಶಕ ವೆಟ್ರಿಮಾರನ್ ಅವರ ಹೇಳಿಕೆಯನ್ನು  ಸಮರ್ಥಿಸಿಕೊಂಡಿರುವ ನಟ ಕಮಲ್ ಹಾಸನ್, ಚೋಳರ ಕಾಲದಲ್ಲಿ ಹಿಂದೂ ಧರ್ಮವೇ ಇರಲಿಲ್ಲ ಎಂದು ಶುಕ್ರವಾರ ಹೇಳಿದ್ದಾರೆ. 

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ವೆಟ್ರಿಮಾರನ್, ‘‘ರಾಜ ರಾಜ ಚೋಳ ಹಿಂದೂ ಆಗಿರಲಿಲ್ಲ. ಆದರೆ,  ಅವರು (ಬಿಜೆಪಿ) ನಮ್ಮ ಅಸ್ಮಿತೆಯನ್ನು ಕಳವುಗೈಯಲು ಪ್ರಯತ್ನಿಸುತ್ತಿದ್ದಾರೆ. ಅವರು ಈಗಾಗಲೇ ತಿರುವಳ್ಳುವರ್‌ನನ್ನು ಕೇಸರೀಕರಣಗೊಳಿಸಲು ಪ್ರಯತ್ನಿಸಿದ್ದಾರೆ. ನಾವು ಅದಕ್ಕೆ ಎಂದೂ ಅವಕಾಶ ನೀಡುವುದಿಲ್ಲ’’ ಎಂದು ಹೇಳಿದ್ದರು. 
ವೆಟ್ರಿಮಾರನ್ ಅವರ ಹೇಳಿಕೆಯನ್ನು ಬೆಂಬಲಿಸಿರುವ ಕಮಲ್ ಹಾಸನ್, ‘‘ರಾಜ ರಾಜ ಚೋಳನ ಕಾಲದಲ್ಲಿ ಹಿಂದೂ ಧರ್ಮ ಎಂಬ ಪದವೇ ಇರಲಿಲ್ಲ. ಆಗ ವೈನವಂ, , ಶೈವಂ ಹಾಗೂ ಸಮನಂಗಳು ಇದ್ದುವು.  ಇದೆಲ್ಲವನ್ನು ಒಟ್ಟಾಗೆ ಹೇಗೆ ಹೇಳಬೇಕು ಎಂದು ಬ್ರಿಟಿಷರಿಗೆ ತಿಳಿಯಲಿಲ್ಲ.   ಆದುದರಿಂದ ಅವರು ಹಿಂದೂ ಎಂಬ ಪದವನ್ನು ಸೃಷ್ಟಿಸಿದರು. ಅವರು ತೂತುಕುಡಿಯನ್ನು  ಟ್ಯೂಟಿಕೊರಿನ್ ಆಗಿ ಬದಲಾಯಿಸಿದಂತೆ ಇದು’’ ಎಂದು ಅವರು ಹೇಳಿದ್ದಾರೆ. 

ರಾಜರಾಜ ಚೋಲನಿಂದ ಪ್ರೇರಿತವಾದ ಕಾದಂಬರಿ ಆಧರಿಸಿದ ಚಿತ್ರ ‘ಪೊನ್ನಿಯಿನ್ ಸೆಲ್ವನ್-೧’ ಬಿಡುಗಡೆಯಾದ ಒಂದು ದಿನದ ಬಳಿಕ ವೆಟ್ರಿಮಾರನ್ ಹೇಳಿಕೆ ನೀಡಿದ್ದರು. 
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News