ಮಂಗಳೂರು: ಬಸ್-ಆ್ಯಂಬುಲೆನ್ಸ್ ಮಧ್ಯೆ ಅಪಘಾತ; ಚಾಲಕ, ರೋಗಿ ಸಹಿತ ನಾಲ್ವರಿಗೆ ಗಾಯ
Update: 2022-10-08 20:09 IST
ಮಂಗಳೂರು, ಅ.8: ನಗರದ ಕುಲಶೇಖರ ಬಳಿ ಬಸ್ ಮತ್ತು ಆ್ಯಂಬುಲೆನ್ಸ್ ಮಧ್ಯೆ ಶನಿವಾರ ಅಪರಾಹ್ನ ಸಂಭವಿಸಿದ ಅಪಘಾತದಲ್ಲಿ ಆ್ಯಂಬುಲೆನ್ಸ್‌ನ ಚಾಲಕ, ರೋಗಿ ಸಹಿತ ನಾಲ್ಕು ಮಂದಿ ಗಾಯಗೊಂಡ ಬಗ್ಗೆ ವರದಿಯಾಗಿದೆ.
ಮೂಡುಬಿದಿರೆ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಆ್ಯಂಬುಲೆನ್ಸ್ ಮತ್ತು ಮಂಗಳೂರಿನಿಂದ ಮೂಡುಬಿದಿರೆ ಕಡೆಗೆ ಹೋಗುತ್ತಿದ್ದ ಖಾಸಗಿ ಬಸ್ ಮಧ್ಯೆ ಢಿಕ್ಕಿ ಸಂಭವಿಸಿತು ಎನ್ನಲಾಗಿದೆ. ಇದರಿಂದ ಆ್ಯಂಬುಲೆನ್ಸ್ ಚಾಲಕ ಮಿಯಾರಿನ ರಾಜೇಶ್‌ರ ಕೈಗೆ ಮತ್ತು ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿ ಅಣ್ಣಿ ದೇವಾಡಿಗರ ತಲೆಗೆ ಗಾಯವಾಗಿದೆ. ಆ್ಯಂಬುಲೆನ್ಸ್‌ನಲ್ಲಿದ್ದ ಅಣ್ಣಿ ದೇವಾಡಿಗರ ಸಂಬಂಧಿಕರಾದ ಗಣೇಶ ದೇವಾಡಿಗ ಮತ್ತು ಗೀತಾ ಅವರ ಕಣ್ಣಿಗೆ ಗಾಯವಾಗಿದೆ ಎಂದು ಪ್ರಕರಣ ದಾಖಲಿಸಿಕೊಂಡಿರುವ ಮಂಗಳೂರು ದಕ್ಷಿಣ ಸಂಚಾರ ಪೊಲೀಸರು ತಿಳಿಸಿದ್ದಾರೆ.