×
Ad

ತನ್ನ ಕಟ್ಟಾ ಅಭಿಮಾನಿಯ ನಿಧನಕ್ಕೆ ದುಃಖ ವ್ಯಕ್ತಪಡಿಸಿದ ಡೇವಿಡ್ ಮಿಲ್ಲರ್

Update: 2022-10-08 23:40 IST
Photo:twitter

ಜೋಹಾನ್ಸ್ ಬರ್ಗ್: ತಮ್ಮ ಪವರ್-ಹಿಟ್ಟಿಂಗ್‌ಗೆ ಹೆಸರುವಾಸಿಯಾಗಿರುವ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್ ಡೇವಿಡ್ ಮಿಲ್ಲರ್ ಅವರು ತನ್ನ ಕಟ್ಟಾ ಪುಟಾಣಿ ಅಭಿಮಾನಿ ಆ್ಯನೆಯ ನಿಧನದ ದುಃಖದ ಸುದ್ದಿಯನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ತೀವ್ರ ಶೋಕ ವ್ಯಕ್ತಪಡಿಸಿದ್ದಾರೆ.

ಆದಾಗ್ಯೂ, ಅನೇಕ ಅಭಿಮಾನಿಗಳು ಮಿಲ್ಲರ್ ಅವರ ಪೋಸ್ಟ್‌ನಲ್ಲಿರುವ ಹುಡುಗಿ ಅವರ ಮಗಳು ಎಂದು ಭಾವಿಸಿದ್ದಾರೆ.  ಆದರೆ ಕ್ಯಾನ್ಸರ್ ನಿಂದ ಮೃತಪಟ್ಟಿರುವ ಬಾಲಕಿ ಮಿಲ್ಲರ್ ಅವರ ಅಭಿಮಾನಿ ಎಂದು ತಿಳಿದುಬಂದಿದೆ.

"ಆರ್ ಐಪಿ  ಲಿಟಲ್ ರಾಕ್‌ಸ್ಟಾರ್" ನಾನು ಆಕೆಯನ್ನುಯಾವಾಗಲೂ ಪ್ರೀತಿಸುತ್ತೇನೆ ಎಂದು ಹೇಳುವ ಶೀರ್ಷಿಕೆಯೊಂದಿಗೆ ಮಿಲ್ಲರ್ ಇನ್‌ಸ್ಟಾಗ್ರಾಮ್‌ನಲ್ಲಿ ವೀಡಿಯೊ ಸ್ಟೋರಿಯನ್ನು  ಪೋಸ್ಟ್ ಮಾಡಿದ್ದಾರೆ,  ಹೃತ್ಪೂರ್ವಕ ಸಂದೇಶವನ್ನು ಒಳಗೊಂಡಿರುವ ಇನ್‌ಸ್ಟಾಗ್ರಾಮ್ ಸ್ಟೋರಿಯ ಮೂಲಕ  ಬಾಲಕಿ ಆ್ಯನೆಯ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಜೀವನದಲ್ಲಿ "ಪ್ರತಿಯೊಂದು ಕ್ಷಣವನ್ನೂ" ಅಮೂಲ್ಯವಾಗಿಟ್ಟುಕೊಳ್ಳುವ ಬಗ್ಗೆ ಆ್ಯನೆ ತನಗೆ ಸಾಕಷ್ಟು ಕಲಿಸಿದರು. ಆಕೆಯೊಂದಿಗಿನ ಪ್ರಯಾಣವನ್ನು ಹಂಚಿಕೊಂಡಿದ್ದಕ್ಕಾಗಿ ವಿನಮ್ರತೆ ಅನುಭವಿಸುತ್ತಿರುವೆ ಎಂದು ಹೇಳಿರುವ ಮಿಲ್ಲರ್ "ನಾನು ನಿನ್ನನ್ನು ತುಂಬಾ ಪ್ರೀತಿಸುತ್ತೇನೆ  " ಎಂದು ಹೇಳುವ ಮೂಲಕ ತಮ್ಮ ಸಂದೇಶವನ್ನುಮುಗಿಸಿದರು .

ಮಿಲ್ಲರ್ ಪ್ರಸ್ತುತ ಭಾರತದಲ್ಲಿ ಭಾರತದ ವಿರುದ್ಧ ಏಕದಿನ  ಸರಣಿಯನ್ನು ಆಡುತ್ತಿದ್ದಾರೆ. ಭಾರತ ಹಾಗೂ  ದಕ್ಷಿಣ ಆಫ್ರಿಕಾ ಸರಣಿಯ ಎರಡನೇ ಏಕದಿನ ಪಂದ್ಯ ರವಿವಾರ ರಾಂಚಿಯಲ್ಲಿ ಆಡಿದವು.

ನಿಧನರಾಗಿರುವುದು ಮಿಲ್ಲರ್ ಮಗಳೆಂದು ತಪ್ಪುತಿಳಿದ ಆಸ್ಟ್ರೇಲಿಯದ ಮಾಜಿ ವೇಗಿ ಟೇಟ್

ಮಿಲ್ಲರ್ ಅವರ ಮಗಳೇ ನಿಧನರಾಗಿದ್ದಾರೆಂದು ತಪ್ಪಾಗಿ ಭಾವಿಸಿದ ಆಸ್ಟ್ರೇಲಿಯದ ಮಾಜಿ ವೇಗದ ಬೌಲರ್ ಶಾನ್ ಟೇಟ್ "ಎಂತಹ ಹೃದಯವಿದ್ರಾವಕ ಸುದ್ದಿ.ಮಿಲ್ಲರ್ ಕುಟುಂಬಕ್ಕೆ ಸಾಂತ್ವಾನ ಹೇಳುವೆ.ಮಿಲ್ಲರ್ ತನ್ನ ಮಗಳ ಕೊನೆಯ ಕ್ಷಣದಲ್ಲಿ ಆಕೆಯ ಜೊತೆಗೆ ಇರದಿರುವುದು ಬೇಸರದ ವಿಚಾರ. ಶಕ್ತಿವಂತರಾಗಿರಿ ಡೇವಿಡ್ ಮಿಲ್ಲರ್'' ಎಂದು ಟ್ವೀಟಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News