×
Ad

ಪಾಣೇಲದಲ್ಲಿ 'ಮಿಲಾದುನ್ನಬಿ' ಆಚರಣೆ

Update: 2022-10-10 16:07 IST

ಮುಡಿಪು, ಅ.10: ಪಾಣೇಲ ಮುಹಿಯುದ್ದೀನ್ ಜುಮಾ ಮಸ್ಜಿದ್ ಹಾಗೂ ಹಯಾತುಲ್ ಇಸ್ಲಾಂ ಮದ್ರಸದ ಆಶ್ರಯದಲ್ಲಿ ಪ್ರವಾದಿ ಮುಹಮ್ಮದ್ ಪೈಗಂಬರ್ (ಸ.) ಅವರ ಜನ್ಮದಿನ 'ಮಿಲಾದುನ್ನಬಿ' ಆಚರಿಸಲಾಯಿತು.

ಈ ಕಾರ್ಯಕ್ರಮ ಪ್ರಯುಕ್ತ ಮದ್ರಸಗಳ ವಿದ್ಯಾರ್ಥಿಗಳಿಂದ ಪ್ರವಾದಿ ಗುಣಗಾನದ ಹಾಡುಗಳು, ದಫ್‌ನೊಂದಿಗೆ ಮೀಲಾದ್ ರ‍್ಯಾಲಿ ನಡೆಯಿತು. ಸಂಜೆ ವಿದ್ಯಾರ್ಥಿಗಳಿಗೆ ಹಾಡು, ಭಾಷಣ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News