ಸಂತೋಷ್ ನಗರ ಮಸೀದಿ ಅಧ್ಯಕ್ಷರಾಗಿ ಹಬೀಬ್ ಅಲಿ
Update: 2022-10-11 16:55 IST
ಉಡುಪಿ, ಅ.11: ಸಂತೋಷ್ ನಗರ ಬದ್ರಿಯಾ ಜುಮಾ ಮಸೀದಿಯ 2022-23ನೆ ಸಾಲಿನ ಅಧ್ಯಕ್ಷರಾಗಿ ಹಬೀಬ್ ಅಲಿ ಖಾದರ್ ಪುನರಾಯ್ಕೆ ಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಮುಹಮ್ಮದ್ ಆಸೀಫ್, ಕಾರ್ಯದರ್ಶಿಯಾಗಿ ಎಸ್.ಎ. ಫೈಸಲ್, ಜೊತೆ ಕಾರ್ಯದರ್ಶಿಯಾಗಿ ಇಮ್ತಿಯಾಝ್, ಕೋಶಾಧಿಕಾರಿಯಾಗಿ ಅಬೂಬಕ್ಕರ್ ಸಿದ್ಧಿಕ್, ಕಾರ್ಯಕಾರಿಣಿ ಸದ್ಯಸರುಗಳಾಗಿ ಮುಹಮ್ಮದ್ ಇಕ್ಬಾಲ್, ಉಮಾರಬ್ಬ, ಅಹಮ್ಮದ್ ಸಾಹೇಬ್, ರಿಯಾಝ್ ಕರಂಬಳ್ಳಿ, ಬಶೀರ್ ಕರಂಬಳ್ಳಿ, ಮೊಯಿದಿನ್ ಸಚ್ಚರಿಪೇಟೆ, ಅಬ್ದುಲ್ ರೆಹಮಾನ್ ಆಯ್ಕೆಯಾದರು.