ಉಕ್ರೇನ್ ಯೋಧರ ಮೃತದೇಹ ಹಸ್ತಾಂತರಿಸಿದ ರಶ್ಯ
Update: 2022-10-11 22:49 IST
ಕೀವ್, ಅ.11: ರಶ್ಯದ ವಾಯುದಾಳಿಯಲ್ಲಿ ಮೃತಪಟ್ಟ 62 ಉಕ್ರೇನ್ ಯೋಧರ ಮೃತದೇಹಗಳನ್ನು ಹಸ್ತಾಂತರಿಸಲು ‘ಕಠಿಣ ಮಾತುಕತೆಯ’ ಬಳಿಕ ರಶ್ಯ ಒಪ್ಪಿದೆ ಎಂದು ಉಕ್ರೇನ್ ಅಧಿಕಾರಿಗಳು ಮಂಗಳವಾರ ಹೇಳಿದ್ದಾರೆ.
ಮತ್ತೊಂದು ಹಸ್ತಾಂತರ ನಡೆದಿದೆ. 62 ಮೃತ ಹೀರೋಗಳು ಮನೆಗೆ ಮರಳಿದ್ದಾರೆ. ಸಂಧಾನ ಮಾತುಕತೆ ಕಠಿಣವಾಗಿತ್ತು, ಆದರೂ ನಮ್ಮ ಯೋಧರನ್ನು ಮರಳಿ ಪಡೆಯಲು ಸಾಧ್ಯವಾಗಿದೆ. ಒಲೆನಿವ್ಕಾ ಜೈಲಿನ ಸಿಬಂದಿಗಳ ಮೃತದೇಹವನ್ನೂ ಹಸ್ತಾಂತರಿಸಲಾಗಿದೆ ಎಂದು ಪ್ರತ್ಯೇಕತಾವಾದಿಗಳ ವಶದಲ್ಲಿರುವ ಉಕ್ರೇನ್ ಪ್ರಾಂತದ ಉಸ್ತುವಾರಿ ಸಚಿವರು ಟ್ವೀಟ್ ಮಾಡಿದ್ದಾರೆ.