×
Ad

ಪಾಕ್: ಬಸ್‍ನಲ್ಲಿ ಬೆಂಕಿ ಅವಘಡ ;18 ಮಂದಿ ಸಜೀವ ದಹನ

Update: 2022-10-13 23:06 IST

ಕರಾಚಿ, ಅ.13: ಪಾಕಿಸ್ತಾನ(Pakistan) ದಲ್ಲಿ ಪ್ರವಾಹ ಸಂತ್ರಸ್ತರು ಪ್ರಯಾಣಿಸುತ್ತಿದ್ದ ಬಸ್ಸಿನಲ್ಲಿ ಇದ್ದಕ್ಕಿದ್ದಂತೆ ಬೆಂಕಿ ಕಾಣಿಸಿಕೊಂಡಿದ್ದು ಬಸ್ಸಿನಲ್ಲಿದ್ದ 12 ಮಕ್ಕಳ ಸಹಿತ ಕನಿಷ್ಟ 18 ಮಂದಿ ಸಜೀವ ದಹನವಾಗಿದ್ದಾರೆ ಎಂದು ಅಧಿಕಾರಿಗಳು ಗುರುವಾರ ಹೇಳಿದ್ದಾರೆ.

ಪಾಕಿಸ್ತಾನವನ್ನು ಕಂಗೆಡಿಸಿದ್ದ ಭೀಕರ ಪ್ರವಾಹದ ಕಾರಣದಿಂದ ಸ್ಥಳಾಂತರಗೊಂಡಿದ್ದ ಜನರು ಇದೀಗ ತಮ್ಮ ಊರಿಗೆ ಮರಳುತ್ತಿದ್ದಾರೆ. ಹೀಗೆ ಮನೆಗೆ ಮರಳುತ್ತಿದ್ದ ಜನರನ್ನು ಕರೆತರುತ್ತಿದ್ದ ಬಸ್ಸಿಗೆ  ಕರಾಚಿಯ ಹೊರವಲಯದಲ್ಲಿ ಬೆಂಕಿ ಹೊತ್ತಿಕೊಂಡಿದೆ. ಮೃತಪಟ್ಟವರಲ್ಲಿ 12 ಮಂದಿ ಮಕ್ಕಳು  ಎಂದು ಅಪಘಾತ ನಡೆದ ಸ್ಥಳದಲ್ಲಿದ್ದ ಜಿಲ್ಲಾ ಆರೋಗ್ಯ ಅಧಿಕಾರಿ ವಿನೋದ್ ಕುಮಾರ್ (Vinod Kumar)  ಹೇಳಿರುವುದಾಗಿ ಎಎಫ್‍ಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಬಸ್ಸಿನ ಏರ್‍ಕಂಡಿಷನಿಂಗ್ ವ್ಯವಸ್ಥೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆದರೆ ತನಿಖೆಯ ಬಳಿಕ ಸ್ಪಷ್ಟ ಕಾರಣ ತಿಳಿಯಲಿದೆ ಎಂದು ಪೊಲೀಸ್ ಅಧಿಕಾರಿ ಹಷೀಮ್ ಬ್ರೊಹಿ ಹೇಳಿದ್ದಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News