ಹಿಜಾಬ್ ವಿವಾದ; ತೀರ್ಪಿನಿಂದಾಗಿ ಖುಷಿಯಲ್ಲದಿದ್ದರೂ ಸಮಾಧಾನ ತಂದಿದೆ: ಯು.ಟಿ.ಖಾದರ್
Update: 2022-10-13 23:26 IST
ಮಂಗಳೂರು, ಅ. 13: ಹಿಜಾಬ್ ವಿವಾದಕ್ಕೆ ಕುರಿತಂತೆ ಇಂದು ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿದ ಶಾಸಕ ಯು.ಟಿ.ಖಾದರ್, ತೀರ್ಪಿನಿಂದಾಗಿ ಖುಷಿಯಲ್ಲದಿದ್ದರೂ ಸಮಾಧಾನ ತಂದಿದೆ ಎಂದು ತಿಳಿಸಿದ್ದಾರೆ.
ದ್ವಿಸದಸ್ಯ ಪೀಠದ ನ್ಯಾಯಾಧೀಶರು ಭಿನ್ನ ತೀರ್ಪು ನೀಡಿರುವುದರಿಂದ ಪ್ರಕರಣ ಮುಖ್ಯ ನ್ಯಾಯಮೂರ್ತಿಗೆ ವರ್ಗಾವಣೆಯಾಗಿದ್ದು ಅಲ್ಲಿನ ಘನವೆತ್ತ ನ್ಯಾಯಾಧೀಶರು ಹಿಜಾಬ್ ಪರ ಸಕಾರಾತ್ಮಕ ತೀರ್ಪು ನೀಡುವ ಆಶಾಭಾವನೆಯಿದೆ ಎಂದು ಖಾದರ್ ತಿಳಿಸಿದರು.
ಹಿಜಾಬ್ ಪರ ಸಮರ್ಪಕವಾದ ವಾದ ಮಂಡಿಸಿ ಇಬ್ಬರು ನ್ಯಾಯಾಧೀಶರಲ್ಲಿ ಒಬ್ಬರಿಗೆ ಮನವರಿಕೆಯಾಗಿಸುವಲ್ಲಿ ಯಶಸ್ವಿಯಾದ ನ್ಯಾಯವಾದಿ ದೇವದತ್ ಕಾಮತ್ ಅವರನ್ನು ಅಭಿನಂದಿಸುತ್ತೇನೆಂದು ಖಾದರ್ ಅವರು ಈ ಸಂದರ್ಭದಲ್ಲಿ ತಿಳಿಸಿದರು.