ಭೂಹಗರಣ: ಬಿಎಸ್‌ವೈ ಅರ್ಜಿಯ ವಿಚಾರಣೆಯಿಂದ ಹಿಂದೆ ಸರಿದ ಸಿಜೆಐ ಲಲಿತ್
ಹೊಸದಿಲ್ಲಿ,ಅ.14: ಬಿ.ಎಸ್.ಯಡಿಯೂರಪ್ಪ ಆರೋಪಿಯಾಗಿರುವ ಭೂಹಗರಣದ ತನಿಖೆಯಿಂದ ಹಿಂದೆ ಸರಿಯಲು ಭಾರತದ ಮುಖ್ಯ ನ್ಯಾಯಮೂರ್ತಿ ಲಲಿತ್ ಶುಕ್ರವಾರ ನಿರ್ಧರಿಸಿದ್ದಾರೆ.
ಜಮೀನು ನೀಡಿಕೆಗೆ ಅನುಮೋದನೆಯನ್ನು ಹಿಂಪಡೆಯಲು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದಲ್ಲಿ ತನ್ನ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ದೂರನ್ನು ಪುನರ್‌ಸ್ಥಾಪಿಸಬೇಕೆಂಬ ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ಇಂದು ಅರ್ಜಿಯ ಆಲಿಕೆ ನಡೆಸಿದ ಸಿಜೆಐ ಲಲಿತ್ ಅವರು ತಾನು ಸದಸ್ಯನಾಗಿರದ ಸುಪ್ರೀಂಕೋರ್ಟ್ನ ಸಮರ್ಪಕವಾದ ಪೀಠದಲ್ಲಿ ದೀಪಾವಳಿಯ ಆನಂತರ ಅರ್ಜಿಯ ವಿಚಾರಣೆ ನಡೆಸಲು ಪ್ರಕರಣವನ್ನು ಪಟ್ಟಿ ಮಾಡುವಂತೆ ಅವರು ಸೂಚಿಸಿದ್ದಾರೆ.
ಸಿಜೆಐ ಲಲಿತ್ ಅವರು ನವೆಂಬರ್ 8ರಂದು ನಿವೃತ್ತರಾಗಲಿದ್ದಾರೆ.
ಬಿ.ಎಸ್.ಯಡಿಯೂರಪ್ಪ, ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಮೂವರ ವಿರುದ್ಧ ಈ ಪ್ರಕರಣಕ್ಕೆ ಸಂಬAಧಿಸಿ ದಾಖಲಾಗಿದ್ದ ಕ್ರಿಮಿನಲ್ ದೂರನ್ನು ಪುನರ್ ಊರ್ಜಿತಗೊಳಿಸುವಂತೆ ಕರ್ನಾಟಕ ಹೈಕೋರ್ಟ್ 2021ರ ಜನವರಿ 5ರಂದು ನೀಡಿದ ಆದೇಶದಲ್ಲಿ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಯಡಿಯೂರಪ್ಪ ಅವರು ಸುಪ್ರೀಂಕೋರ್ಟ್ ಮೆಟ್ಟಲೇರಿದ್ದರು.
ಈ ವಿಷಯದಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸದAತೆ ಸುಪ್ರೀಂಕೋರ್ಟ್ 2021ರ ಜನವರಿ 27ರಂದು ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ನೀಡಿತ್ತು.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿರುವ ದೇವನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ತನಗೆ ಮಂಜೂರು ಮಾಡಲಾಗಿದ್ದ 26 ಎಕರೆ ಜಮೀನು ವಿತರಿಸಲು ಉನ್ನತ ಮಟ್ಟದ ಮಂಜೂರಾತಿ ಸಮಿತಿಯು ನೀಡಿದ್ದ ಅನುಮೋದನೆಯನ್ನು ಹಿಂಪಡೆಯಲು ಯಡಿಯೂರಪ್ಪ ಹಾಗೂ ಇತರರು ಕ್ರಿಮಿನಲ್ ಸಂಚು ನಡೆಸಿದ್ದರು ಹಾಗೂ ನಕಲಿ ದಾಖಲೆಗಳನ್ನು ಸೃಷ್ಟಿಸಿದ್ದರು ಎಂದು ದೂರುದಾರ ಎ.ಆಲಂ ಪಾಷಾ ಆರೋಪಿಸಿದ್ದರು.
ಭಾರತೀಯ ದಂಡಸAಹಿತೆ ಸೆಕ್ಷನ್‌ಗಳಾದ 418,465, 468,471 ಹಾಗೂ 120ಬಿ ಹಾಗೂ ಭ್ರಷ್ಟಾಚಾರ ತಡೆ ಕಾಯ್ದೆ ಯ 13(1)(ಸಿ), 13(1)(ಡಿ) (i i) ಅನ್ವಯ ಯಡಿಯೂರಪ್ಪ ವಿರುದ್ಧ ಕ್ರಮ ಜರಗಿಸಬೇಕೆಂದು ಆಲಂಪಾಶಾ ಅವರು ದೂರಿನಲ್ಲಿ ಆಗ್ರಹಿಸಿದ್ದರು.