ರಷ್ಯಾ-ನ್ಯಾಟೋ ಪಡೆಗಳ ನಡುವೆ ಸಂಘರ್ಷ ನಡೆದರೆ ಜಾಗತಿಕ ವಿನಾಶ: ಪುಟಿನ್ ಎಚ್ಚರಿಕೆ

Update: 2022-10-15 11:18 GMT
Photo: PTI

ಮಾಸ್ಕೋ: ರಷ್ಯಾ ಮತ್ತು ನ್ಯಾಟೋ(NATO) ಪಡೆಗಳ ನಡುವೆ ಸಂಘರ್ಷವೇನಾದರೂ ಸಂಭವಿಸಿದರೆ ಅದು ಜಾಗತಿಕವಾಗಿ ವಿನಾಶಕ್ಕೆ ಕಾರಣವಾಗಬಹುದು ಎಂದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್(Vladimir Putin) ಎಚ್ಚರಿಸಿದ್ದಾರೆ.

"ನ್ಯಾಟೋ ಪಡೆಗಳು ಮತ್ತು ರಷ್ಯಾ ಸೇನೆಯ(Russian Army) ನಡುವೆ ನೇರ ಕಾದಾಟ ಅಪಾಯಕಾರಿಯಾಗುವುದು. ಇದನ್ನು ಹೇಳುವವರು ಇಂತಹ ಒಂದು ಕ್ರಮ ಕೈಗೊಳ್ಳದೇ ಇರುವಷ್ಟು ಚತುರರಾಗಿದ್ದಾರೆ,'' ಎಂದು ಪುಟಿನ್ ಹೇಳಿದರು.

ಉಕ್ರೇನ್ ಮೇಲೆ ಹೊಸ ಬೃಹತ್ ದಾಳಿಗಳು ಆಗತ್ಯವಿಲ್ಲ, ಏಕೆಂದರೆ ಹೆಚ್ಚಿನ ಗುರಿಗಳ ಮೇಲೆ ದಾಳಿ ನಡೆಸಲಾಗಿದೆ ಹಾಗೂ ಆ ದೇಶವನ್ನು ನಾಶಗೈಯ್ಯುವ ಉದ್ದೇಶ ರಷ್ಯಾಗಿಲ್ಲ ಎಂದು ಅವರು ಹೇಳಿದರು.

ರಷ್ಯಾ ಮಾತುಕತೆ ನಡೆಸಲು ಸಿದ್ಧವಿದೆ ಆದರೆ ಉಕ್ರೇನ್(Ukraine) ಇದರಲ್ಲಿ ಭಾಗವಹಿಸಬೇಕಿದ್ದರೆ ಅಂತಾರಾಷ್ಟ್ರೀಯ ಮಧ್ಯಸ್ಥಿಕೆ ಅಗತ್ಯವಿರಬಹುದು ಎಂದು ಅವರು ಹೇಳಿದರು.

ಉಕ್ರೇನ್ ಮೇಲೆ ದಾಳಿ ನಡೆಸಿದ್ದಕ್ಕೆ ವಿಷಾದವಿಲ್ಲ ಎಂದು ಹೇಳಿದ ಅವರು  ಅದರ ವಿರುದ್ಧ ಕಾರ್ಯಾಚರಣೆ ನಡೆಸಿರದೇ ಇದ್ದರೆ ಪರಿಸ್ಥಿತಿ ಕೆಟ್ಟದ್ದಾಗುತ್ತಿತ್ತು ಎಂದರು.

"ನಾನು ಸ್ಪಷ್ಟಪಡಿಸಲು ಬಯಸುತ್ತೇನೆ. ಈಗ ನಡೆಯುತ್ತಿರುವುದು  ಹಿತಕರವಲ್ಲ, ಆದರೆ ಇದೇ ಪರಿಸ್ಥಿತಿ ಇನ್ನಷ್ಟು ಗಂಭೀರವಾಗಿ ಮುಂದೆ ಎದುರಾಗುತ್ತಿತ್ತು. ನಾವು ಸರಿಯಾದ ಹಾಗೂ ಸೂಕ್ತವಾದ ಸಮಯದಲ್ಲಿ ಕ್ರಮಕೈಗೊಳ್ಳುತ್ತಿದ್ದೇವೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News