×
Ad

ಮಂಗಳೂರು: ಹೋಂಡಾ ಬಿಗ್‌ವಿಂಗ್‌ ನಿಂದ ಮೊದಲ ವಾರ್ಷಿಕೋತ್ಸವ; ನೂತನ CB 300F ಅನಾವರಣ

Update: 2022-10-15 21:53 IST

ಮಂಗಳೂರು: ನಗರದ ಕೊಟ್ಟಾರ ಚೌಕಿ ಬಳಿ ಇರುವ ಹೋಂಡಾ ಬಿಗ್‌ವಿಂಗ್ ಶೋರೂಂ ಶನಿವಾರ ತನ್ನ ಮೊದಲ ವಾರ್ಷಿಕೋತ್ಸವವನ್ನು ಹೋಂಡಾದ ಇತ್ತೀಚಿನ ನೂತನ CB ಬೈಕ್ ಆವೃತ್ತಿಯ CB 300F ಅನಾವರಣ ಮಾಡುವುದರೊಂದಿಗೆ ಆಚರಿಸಿತು.

ನಗರದ ಕೊಟ್ಟಾರ ಚೌಕಿಯಲ್ಲಿರುವ ಹೋಂಡಾ ಬಿಗ್‌ವಿಂಗ್ ಶೋರೂಂನಲ್ಲಿ ಸಮಾರಂಭ ನಡೆಯಿತು.

ಸಮಾರಂಭದಲ್ಲಿ ಹೋಂಡಾ ದಕ್ಷಿಣ ಮತ್ತು ಪಶ್ಚಿಮ ವಿಭಾಗದ ಮಾರಾಟ ಮುಖ್ಯಸ್ಥ ವೆಂಕಟರಮನ್, ಕಾಂಚನಾ ಮೋಟಾರ್ಸ್ ಆಡಳಿತ ನಿರ್ದೇಶಕ ಪ್ರಸಾದ್‌ ರಾಜ್‌ ಕಾಂಚನ್,‌ ಕಾಂಚನಾ ಮೋಟಾರ್ಸ್ ಜನರಲ್ ಮ್ಯಾನೇಜರ್ ಪ್ರತೀಕ್ ಕಾಮತ್, ಯೂಟ್ಯೂಬರ್ ಹಾಗೂ ವೀಕೆಂಡ್ ಆನ್ ವೀಲ್ಸ್ ರೈಡ್ಸ್ ಮುಖ್ಯಸ್ಥ ಗಿರೀಶ್ ಶೇಟ್ ಮತ್ತಿತರರು ಉಪಸ್ಥಿತರಿದ್ದರು.

ಪ್ರಸಾದ್ ರಾಜ್ ಕಾಂಚನ್ ಸಭೆಯನ್ನುದ್ದೇಶಿಸಿ ಮಾತನಾಡುತ್ತಾ, ಮಂಗಳೂರಿನ ಹೋಂಡಾ ಬಿಗ್‌ವಿಂಗ್ ಶೋರೂಮ್ ತನ್ನ ಮೊದಲ ವರ್ಷದ ಸೇವೆಯಲ್ಲಿ 750 ಸಂತೃಪ್ತ ಗ್ರಾಹಕರನ್ನು ಹೊಂದಿದ್ದು, ಶೋರೂಂ ನಡೆಸುತ್ತಿರುವ ಸಿಬ್ಬಂದಿ ಮತ್ತು ತಂಡದ ಪ್ರಯತ್ನವನ್ನು ಶ್ಲಾಘಿಸಿದರು. ವಿವಿಧ ಬೈಕಿಂಗ್ ಮತ್ತು ರೈಡರ್ಸ್ ಗುಂಪಿನ ಹಲವಾರು ಸದಸ್ಯರು ಸಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು, ಅವರು ತಮ್ಮ ಅನುಭವಗಳನ್ನು ಪ್ರೇಕ್ಷಕರೊಂದಿಗೆ ಹಂಚಿಕೊಂಡರು.

ಹೋಂಡಾ ಬಿಗ್‌ವಿಂಗ್ ಶೋರೂಮ್‌ಗಳು ಪ್ರೀಮಿಯಂ ಶೋರೂಮ್ ಆಗಿದ್ದು, ಇದು 300 ಸಿಸಿಗೂ ಹೆಚ್ಚಿನ ಕಾರ್ಯಕ್ಷಮತೆಯುಳ್ಳ ಹೋಂಡಾದ ಪ್ರೀಮಿಯಂ ಬೈಕ್‌ಗಳನ್ನು ಮಾರಾಟ ಮಾಡುತ್ತದೆ. ಬಿಗ್‌ವಿಂಗ್ ಶೋರೂಮ್‌ಗಳನ್ನು 2020 ರಲ್ಲಿ ಪ್ರಾರಂಭಿಸಲಾಗಿದ್ದು, ಇದು ಭಾರತದಾದ್ಯಂತ ಹರಡಿದೆ. 2021ರ ಅಕ್ಟೋಬರ್‌ನಲ್ಲಿ ಮಂಗಳೂರಿನಲ್ಲಿ ಶೋರೂಮ್ ಪ್ರಾರಂಭಿಸಲಾಯಿತು.

ಪ್ರಸಾದ್ ರಾಜ್ ಕಾಂಚನ್ ವಂದಿಸಿ, ಅರ್ಪಿತ್ ಕಾರ್ಯಕ್ರಮವನ್ನು ನಿರೂಪಿಸಿದರು.

CB 300F ಬಗ್ಗೆ:

ಇದು ನಿರಂತರ ಕಾರ್ಯಕ್ಷಮತೆಗಾಗಿ, CB300F 4 ವಾಲ್ವ್, 300CC ಆಯಿಲ್ ಕೂಲ್ಡ್ ಎಂಜಿನ್ ಅನ್ನು ಹೊಂದಿದೆ. ವಿಶಿಷ್ಟ HSVCS ವ್ಯವಸ್ಥೆಯು ಸವಾರಿಗೆ ಅಡ್ಡಿಯಾಗದಂತೆ ರೈಡರ್ ಗೆ ಸಹಾಯ ಮಾಡುತ್ತದೆ. ಇದನ್ನು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಸೇರಿಸಿ ನಿರ್ಮಿಸಲಾಗಿದ್ದು, ನಗರಗಳಲ್ಲಿನ ಸವಾರಿಗಳನ್ನು ಹೆಚ್ಚು ಆರಾಮದಾಯಕವಾಗಿಸುತ್ತದೆ ಮತ್ತು ವಿವಿಧ ರಸ್ತೆಗಳಲ್ಲಿ ಉತ್ತಮ ಅನುಭವ ನೀಡುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News