ಬ್ಯಾರಿಗಳಿಗೆ ಒಂದು ಕಾಲದಲ್ಲಿ ಶಾಲೆಗಳ, ನಾಯಕತ್ವ ಕೊರತೆ ಇತ್ತು: ಯು.ಕೆ.ಮೋನು ಕಣಚೂರು

Update: 2022-10-15 16:56 GMT

ಕೊಣಾಜೆ: ಬ್ಯಾರಿಗಳಿಗೆ ಒಂದು ಕಾಲದಲ್ಲಿ ಶಾಲೆಗಳ ಕೊರತೆ ಇತ್ತು. ಬ್ಯಾರಿಗಳಿಗೆ ನಾಯಕತ್ವ ಕೊರತೆ ಇತ್ತು. ರಾಜಕೀಯದಲ್ಲಿ ಬೆರಳೆಣಿಕೆಯಷ್ಟು ಮಾತ್ರ ಬ್ಯಾರಿಗಳು ಇದ್ದರು. ಇದ್ದಿನಬ್ಬ, ಮಸೂದ್, ಫರೀದ್ ಮುಂತಾದ ಬೆರಳೆಣಿಕೆಯಷ್ಟು ರಾಜಕಾರಣಿಗಳು ಇದ್ದರು. ಈಗ ಬ್ಯಾರಿಗಳ ಶಿಕ್ಷಣ ಸಂಸ್ಥೆ ಬೆಳೆದಿವೆ. ಅದೇ ರೀತಿ ಬ್ಯಾರಿ ಭಾಷೆ, ಸಂಸ್ಕೃತಿ ಬೆಳೆಯಬೇಕು. ರಾಜಕೀಯದಲ್ಲಿ ಬ್ಯಾರಿಗಳಿಗೆ ಅವಕಾಶ ಸಿಗಬೇಕು. ಉನ್ನತ ಹಂತಕ್ಕೆ ಬ್ಯಾರಿ ಸಮುದಾಯ ತಲುಪಬೇಕು. ನಾಯಕತ್ವ ಬೆಳೆಯಬೇಕು  ಎಂದು ಕಣಚೂರು ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ಅಧ್ಯಕ್ಷ ಯು.ಕೆ.ಮೋನು ಕಣಚೂರು ಹೇಳಿದರು.

ಅವರು ಮೇಲ್ತೆನೆ ಬ್ಯಾರಿ ಎಲ್ತ್ ಕಾರ್ ಪಿನ್ನೆ ಕಲಾವಿದರ ಕೂಟ ಇದರ ಆಶ್ರಯದಲ್ಲಿ ಕಣಚೂರು ಕ್ಯಾಂಪಸ್ ನಲ್ಲಿ ಶನಿವಾರ ನಡೆದ ಉಳ್ಳಾಲ ತಾಲೂಕು ಎರಡನೇ ಬ್ಯಾರಿ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ಮಾತನಾಡಿದರು.

ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದ್ದ ಬಿ.ಎ.ಮೊಹಮ್ಮದ್ ಹನೀಫ್ ಮಾತನಾಡಿ, ಮೇಲ್ತೆನೆ ಉಳ್ಳಾಲ ತಾಲೂಕು ನಲ್ಲಿ ಬ್ಯಾರಿ ಸಾಹಿತ್ಯ, ಭಾಷೆ ಸಂಸ್ಕೃತಿ ಅಭಿವೃದ್ಧಿಗಾಗಿ ಬಹಳಷ್ಟು ಸೇವೆ ಮಾಡುತ್ತಿರುವುದು ಸ್ವಾಗತಾರ್ಹ. ಇಸ್ಲಾಂ ಧರ್ಮ ವನ್ನು ಅರ್ಥ ಮಾಡಿಕೊಂಡು ಮುಸ್ಲಿಂ ಆದ ರೀತಿಯಲ್ಲಿ ಬ್ಯಾರಿ ಜನಾಂಗ ಮತ್ತು ಅಥವಾ ಬಾಯಿರಿ ಜನಾಂಗ ಈಗ ಬ್ಯಾರಿ ಆಗಿದ್ದಾರೆ ಎನ್ನುವುದು ನಾವು ಕಲಿಯಬೇಕಾದ ವಿಚಾರ. ಬ್ಯಾರಿ ಭಾಷೆ ಮತ್ತು ಸಾಹಿತ್ಯದ ಬಗ್ಗೆ ಅಧ್ಯಯನ ಆಗಬೇಕು. ಬಂಟ್ವಾಳ ಮತ್ತು ಮಂಗಳೂರು ತಾಲೂಕು ಗೊಳಪಟ್ಟಿದ್ದ 23 ಗ್ರಾಮಗಳನ್ನು ಒಟ್ಟು ಗೂಡಿಸಿ  ಶಾಸಕ ಯುಟಿ ಖಾದರ್ ರವರ ಪ್ರಯತ್ನ ದಿಂದ ತಾಲೂಕು ರಚನೆ ಆಗಿದೆ. ಹಲವು ಕಚೇರಿಗಳು ಬರಲಿವೆ ಎಂದರು.

ಈ ಸಂದರ್ಭದಲ್ಲಿ ಆಶಿರುದ್ದೀನ್ ಸಾರ್ತಬೈಲ್ ಸಂಪಾದಕತ್ವದ ಮೇಲ್ತನೆ ಬುಲೆಟಿನ್ ಬಿಡುಗಡೆ ಗೊಳಿಸಲಾಯಿತು. ಅಬ್ಬಾಸ್ ಉಚ್ಚಿಲ ಬುಲೆಟಿನ್ ಬಿಡುಗಡೆ ಗೊಳಿಸಿದರು.

ಕಾರ್ಯಕ್ರಮ ದಲ್ಲಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಹರೇಕಳ ಹಾಜಬ್ಬ,  ದೇರಳಕಟ್ಟೆ ಬದ್ರಿಯಾ  ಜುಮ್ಮಾ ಮಸೀದಿ ಅಧ್ಯಕ್ಷ ಅಬೂಬಕ್ಕರ್ ನಾಟೆಕಲ್, ಜೆಡಿಎಸ್ ಮುಖಂಡ ಅಬೂಬಕ್ಕರ್ ನಾಟೆಕಲ್,ಜಿ.ಪಂ.ಮಾಜಿ ಸದಸ್ಯ ಅಝೀಝ್ ಮಲಾರ್, ಕೆಪಿಸಿಸಿ ಕೋ ಆರ್ಡಿನೇಟರ್  ಫಾರೂಕ್ ಉಳ್ಳಾಲ್, ಬಾವಾ ಪ್ಲೈವುಡ್ ಮಾಲಕ ಡಾ.ಕೆ.ಎಂ.ಮುನೀರ್ ಬಾವಾ, ಕಣಚೂರು ಮಹಿಳಾ ಕಾಲೇಜು ಪ್ರಾಂಶುಪಾಲ ಶಾಹಿದಾ ಬಿ.ಎಂ., ಕುನಿಲ್ ಸ್ಕೂಲ್ ವೈಸ್ ಚಯರ್ ಮ್ಯಾನ್ ಪಿ.ಎಸ್.ಮೊಯ್ದಿನ್ ಕುಂಞಿ,ತಾ.ಪಂ. ಮಾಜಿ ಸದಸ್ಯ ಮುಸ್ತಫಾ ಪಾವೂರು, ಪಾವೂರು ಗ್ರಾ.ಪಂ.ಉಪಾಧ್ಯಕ್ಷ ಮುಹಮ್ಮದ್ ಅನ್ಸಾರ್ ಇನೋಳಿ, ಸುನ್ನಿ ಸಂದೇಶ ಪ್ರಕಾಶಕ ಮುಸ್ತಫಾ ಫೈಝಿ ಕಿನ್ಯ, ಮೇಲ್ತೆನೆ ಗೌರವ ಅಧ್ಯಕ್ಷ ಆಲಿಕುಂಞಿ ಪಾರೆ,ವಾದಿ ತ್ವಯಿಬ ಕಾರ್ಯ ದರ್ಶಿ ಅಬೂಸಾಲಿ ಹಾಜಿ ಕಿನ್ಯ, ಸಿಪಿಎಂ ಮುಖಂಡ ರಫೀಕ್ ಹರೇಕಳ, ಡಿ.ಐ. ಅಬೂಬಕ್ಕರ್ ಕೈರಂಗಳ, ಬೆಳ್ಮ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಯೂಸುಫ್ ಬಾವಾ, ಯೂಸುಫ್ ವಕ್ತಾರ್, ಕೋಟೆಕಾರು ಪ.ಪಂ.ಸದಸ್ಯ ಆಯಿಶಾ ಅಬ್ಬಾಸ್,  ಮತ್ತಿತರರು ಉಪಸ್ಥಿತರಿದ್ದರು.

ಬಶೀರ್ ಅಹ್ಮದ್ ಕಿನ್ಯ ಧ್ಯೇಯ ಗೀತೆ ಹಾಡಿದರು. ಹಂಝ ಮಲಾರ್ ಕಾರ್ಯಕ್ರಮ ನಿರೂಪಿಸಿದರು.ಸ್ವಾಗತ ಸಮಿತಿ ಅಧ್ಯಕ್ಷ ನಝೀರ್ ಉಳ್ಳಾಲ ಸ್ವಾಗತಿಸಿದರು.ನಾಸೀರ್ ಟಿ.ಎಸ್ ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News