×
Ad

ಹಕ್ಕಿ ಢಿಕ್ಕಿ: ಮುಂಬೈಯಿಂದ ಬೆಂಗಳೂರಿಗೆ ತೆರಳುತ್ತಿದ್ದ ವಿಮಾನ ಮಾರ್ಗ ಮಧ್ಯೆ ವಾಪಾಸ್

Update: 2022-10-15 22:27 IST
PHOTO: PTI

ಮುಂಬೈ, ಅ. 15: ಮುಂಬೈಯಿಂದ ಬೆಂಗಳೂರಿಗೆ ತೆರಳುತ್ತಿದ್ದ ಆಕಾಸಾ ಏರ್ ಕಂಪೆನಿಯ ವಿಮಾನಕ್ಕೆ ಹಕ್ಕಿ ಢಿಕ್ಕಿಯಾಗಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ. ಈ ಹಿನ್ನೆಲೆಯಲ್ಲಿ ವಿಮಾನ ಮಾರ್ಗ ಮಧ್ಯದಲ್ಲೇ ಮುಂಬೈ ವಿಮಾನ ನಿಲ್ದಾಣಕ್ಕೆ ಹಿಂದಿರುಗಿ ಸುರಕ್ಷಿತವಾಗಿ ಇಳಿದಿದೆ.

ವಿಮಾನದ ಕ್ಯಾಬಿನ್‌ನಲ್ಲಿ ಸುಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ ಆಕಾಸಾ ಏರ್ ಕಂಪೆನಿಯ ವಿಮಾನವನ್ನು ಮುಂಬೈ ವಿಮಾನ ನಿಲ್ದಾಣದಲ್ಲಿ ಇಳಿಸಲಾಗಿದ್ದು, ಎಲ್ಲ ಪ್ರಯಾಣಿಕರು ಸುರಕ್ಷಿತರಾಗಿದ್ದಾರೆ ಎಂದು ನಾಗರಿಕ ವಿಮಾನ ಯಾನದ ನಿರ್ದೇಶನಾಲಯ ತಿಳಿಸಿದೆ.

ವಿಮಾನ ಇಳಿದ ಬಳಿಕ ಪರಿಶೀಲಿಸಿದಾಗ ಎಂಜಿನ್ ನಂಬರ್ ೧ನಲ್ಲಿ ಹಕ್ಕಿಯ ಕಳೇಬರ ಪತ್ತೆಯಾಗಿದೆ. ಹಕ್ಕಿ ಢಿಕ್ಕಿಯಾಗಿರುವುದರಿಂದ ಸುಟ್ಟ ವಾಸನೆ ಬಂದಿದೆ ಎಂದು ಅದು ತಿಳಿಸಿದೆ.

ಘಟನೆ ಕುರಿತು ಪರಿಶೀಲನೆ ನಡೆಸಲಾಗುತ್ತಿದೆ. ವಿಮಾನದಲ್ಲಿ ಎಷ್ಟು ಮಂದಿ ಪ್ರಯಾಣಿಕರು ಇದ್ದರು ಎಂಬುದು ಇದುವರೆಗೆ ತಿಳಿದು ಬಂದಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News