ದುಬೈಯಲ್ಲಿ ರಸ್ತೆ ಅಪಘಾತ: ಬೆಳ್ತಂಗಡಿಯ ಯುವಕ ಮೃತ್ಯು
Update: 2022-10-16 08:39 IST
ಬೆಳ್ತಂಗಡಿ, ಅ. 16: ಕುವೆಟ್ಟು ಗ್ರಾಮದ ನಿವಾಸಿ ಯುವಕನೋರ್ವ ದುಬೈಯಲ್ಲಿ ನಡೆದ ಬೈಕ್ ಅಪಘಾತದಲ್ಲಿ ಮೃತಪಟ್ಟ ಘಟನೆ ಸಂಭವಿಸಿದೆ.
ಮೃತ ಯುವಕ ಕುವೆಟ್ಟು ಶಾಲೆಯ ಬಳಿಯ ನಿವಾಸಿ ಫ್ಲೇವಿನ್ ಅವಿನ್ ರೋಡ್ರಿಗಸ್ ಎಂದು ತಿಳಿದುಬಂದಿದೆ.
ಸ್ಥಳೀಯ ನಿವಾಸಿಗಳಾದ ಸಿರಿಲ್ ಹಾಗೂ ಮೇರಿ ದಂಪತಿಯ ಪುತ್ರ ಫ್ಲೇವಿನ್ ಅವರು ಮಡಂತ್ಯಾರು ಕಾಲೇಜಿನಲ್ಲಿ ಶಿಕ್ಷಣ ಮುಗಿಸಿ ದುಬೈಗೆ ತೆರಳಿದ್ದರು. ಕೆಲಸ ಮುಗಿಸಿ ರೂಮಿಗೆ ಹಿಂತಿರುಗುತ್ತಿದ್ದ ವೇಳೆ ಬೈಕ್ ಅಪಘಾತ ಸಂಭವಿಸಿದ್ದು, ಗಂಭೀರ ಗಾಯಗೊಂಡ ಫ್ಲೇವಿನ್ ಅವರು ಮೃತಪಟ್ಟರು ಎಂದು ತಿಳಿದುಬಂದಿದೆ.