×
Ad

ಸುರತ್ಕಲ್‌ ಟೋಲ್ ವಿರುದ್ಧದ ಹೋರಾಟಕ್ಕೆ ದಸಂಸ ಬೆಂಬಲ

Update: 2022-10-16 17:40 IST

ಮಂಗಳೂರು, ಅ.16: ಸುರತ್ಕಲ್‌ನ ಟೋಲ್‌ಗೇಟ್ ತೆರವಿಗೆ ಒತ್ತಾಯಿಸಿ ಅವಳಿ ಜಿಲ್ಲೆಗಳ ಸಾರಿಗೆ ಸಂಘಟನೆ ಗಳು, ನೌಕರರು, ಪ್ರಜ್ಞಾವಂತ ನಾಗರಿಕರು ಕಳೆದ 7 ವರ್ಷಗಳಿಂದ ಪ್ರಜಾಪ್ರಭುತ್ವದ ಚೌಕಟ್ಟಿನಲ್ಲಿ ಶಾಂತಿಯುತ ವಾಗಿ ನಡೆಸುವ ಹೋರಾಟವನ್ನು ಹತ್ತಿಕ್ಕಲು ಆಡಳಿತ ವ್ಯವಸ್ಥೆಯು ಪೊಲೀಸ್ ಇಲಾಖೆಯನ್ನು ದುರುಪಯೋಗಿಸಿ ಕೊಂಡಿರುವುದು ಖಂಡನೀಯ. ಅ.18ರಂದು ನಡೆಯುವ ಪ್ರತಿಭಟನೆಗೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ) (ಪ್ರೊ.ಬಿ.ಕೃಷ್ಣಪ್ಪಸ್ಥಾಪಿತ) ದ.ಕ. ಜಿಲ್ಲಾ ಸಮಿತಿಯು ಬೆಂಬಲ ವ್ಯಕ್ತಪಡಿಸಿರುವುದಾಗಿ ಪ್ರಕಟನೆ ತಿಳಿಸಿದೆ.

ನ್ಯಾಯಪರ ಹೋರಾಟಕ್ಕೆ ಸರಕಾರ, ಹೆದ್ದಾರಿ ಪ್ರಾಧಿಕಾರ, ಜಿಲ್ಲಾಡಳಿತ, ಸಂಸದರು, ಶಾಸಕರು ಸ್ಪಂದಿಸದೆ ಸುಳ್ಳು ಭರವಸೆಗಳನ್ನು ನೀಡುತ್ತಾ ಕಾಲಹರಣ ಮಾಡುತ್ತಿದ್ದಾರೆ. ಹೋರಾಟಗಾರರಿಗೆ ಪೊಲೀಸ್ ಇಲಾಖೆಯು ನೊಟೀಸ್ ನೀಡಿ ಹತ್ತಿಕ್ಕಲು ಯತ್ನಿಸುತ್ತಿವೆ. ಇದರ ವಿರುದ್ಧ ಜನರು ಎಚ್ಚೆತ್ತಕೊಂಡು ಹೋರಾಟಕ್ಕೆ ಬೆಂಬಲ ನೀಡಬೇಕು ಎಂದು ದಸಂಸ ಜಿಲ್ಲಾ ಸಂಚಾಲಕ ರಘು ಕೆ.ಎಕ್ಕಾರ್ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News