ಮೇಲ್ತೆನೆ ಸ್ಪರ್ಧೆಯ ಫಲಿತಾಂಶ ಪ್ರಕಟ
Update: 2022-10-16 17:45 IST
ಮಂಗಳೂರು: ಬ್ಯಾರಿ ಲೇಖಕರು-ಕಲಾವಿದರ ಕೂಟ ‘ಮೇಲ್ತೆನೆ’ಯ ವತಿಯಿಂದ ದೇರಳಕಟ್ಟೆಯ ಕಣಚೂರು ಪಬ್ಲಿಕ್ ಸ್ಕೂಲ್ ಕ್ಯಾಂಪಸ್‌ನಲ್ಲಿ ನಡೆದ ಉಳ್ಳಾಲ ತಾಲೂಕು ಎರಡನೆ ಬ್ಯಾರಿ ಸಾಹಿತ್ಯ ಸಮ್ಮೇಳನದ ಪ್ರಯುಕ್ತ ಏರ್ಪಡಿಸಲಾದ ಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿವೆ.
ಆಶುಕವನ ಸ್ಪರ್ಧೆಯಲ್ಲಿ ರಮ್ಲತ್ ನಂದರಬೆಟ್ಟು (ಪ್ರಥಮ), ಮುಹಮ್ಮದ್ ಉವೈಸ್ ಉದ್ದಬೆಟ್ಟು (ದ್ವಿತೀಯ) ಬಹುಮಾನ ಗಳಿಸಿದ್ದಾರೆ.
ಮೆಹಂದಿ ಸ್ಪರ್ಧೆಯಲ್ಲಿ ಫಾತಿಮಾ ಫಝೀನಾ ಕುಂಪಲ (ಪ್ರಥಮ), ಸಾನಿಯಾ ಅಡ್ಕರಪಡ್ಪು (ದ್ವಿತೀಯ), ಖತೀಜಾ ಸನಾ ಕಲ್ಲಾಪು (ತೃತೀಯ) ಬಹುಮಾನ ಗಳಿಸಿದ್ದಾರೆ.
ತೀರ್ಪುಗಾರರಾಗಿ ಮುಹಮ್ಮದಲಿ ಕಮ್ಮರಡಿ ಮತ್ತು ಹುಸೈನ್ ಕಾಟಿಪಳ್ಳ, ಫಾತಿಮಾ ಮೆಹರೂನ್ ಹಾಗೂ ರಮ್ಲತ್ ಮಂಚಿಲ ಸಹಕರಿಸಿದ್ದರು ಎಂದು ಸ್ಪರ್ಧೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮದ ಸಂಚಾಲಕ ಇಸ್ಮಾಯೀಲ್ ಟಿ. ಪ್ರಕಟನೆಯಲ್ಲಿ ತಿಳಿಸಿದ್ದಾರೆ.